ತೋಟಕ್ಕೆ ಔಷಧಿ ಸಿಂಪಡಿಸುವಾಗ ವಿದ್ಯುತ್ ಶಾಕ್: ಸ್ಥಳದಲ್ಲಿ ವ್ಯಕ್ತಿ ಸಾವು

ವಿಜಯ ಸಂಘರ್ಷ 
ಸೊರಬ: ತಾಲೂಕಿನ ಓಟೂರು ಗ್ರಾಮದಲ್ಲಿ ತೋಟದಲ್ಲಿ ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳ ದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೃತಪಟ್ಟವರನ್ನು ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ್(35) ಎಂದು ಗುರುತಿಸಲಾಗಿದೆ.

ತಂದೆ ಮತ್ತು ಅಣ್ಣನೊಂದಿಗೆ ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಲು ಹೋಗಿದ್ದರು. ತೋಟದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಔಷದ ಸಿಂಪಡಿಸುವಾಗ ಪೈಪ್ ನಿಂದ ವಿದ್ಯುತ್ ಪ್ರವಹಿಸಿ ಶ್ರೀಕಾಂತ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ.ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು