ವಿಜಯ ಸಂಘರ್ಷ
ಭದ್ರಾವತಿ: ಆನ್ಲೈನ್ ಆಯಪ್ ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾಗದ ನಗರದ 6 ನೇ ವಾರ್ಡ್ನಲ್ಲಿ ನಡೆದಿದೆ. ಪ್ರದೀಪ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಆನ್ ಲೈನ್ನಲ್ಲಿ ಒನ್ ಟು ಡಬಲ್ ಹಣ ಆಗುತ್ತದೆ ಎಂದು ನಂಬಿ 91 ಸಾವಿರ ರೂಪಾಯಿ ಸಾಲ ಮಾಡಿ ಹಣ ತೊಡಗಿಸಿ ಮೋಸ ಹೋಗಿದ್ದ. ಹಣ ಪಾವಸ್ ಬಾರದ ಹಿನ್ನಲೆಯಲ್ಲಿ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಈತ ಮಾಚೇನಹಳ್ಳಿಯ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಆನ್ ಲೈನ್ ಆಯಪ್ಗಳನ್ನು ನಂಬಿ ಮೋಸ ಹೋಗಿ ಕೊನೆಯುಸಿರೆಳೆದಿದ್ದಾನೆ.
ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.