ವಿಜಯ ಸಂಘರ್ಷ
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕೊಮ್ಮೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೂಪ ವಾಸು ಮತ್ತು ಉಪಾಧ್ಯಕ್ಷರಾಗಿ ರುಕ್ಮಿಣಿ ಸೋಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ರೂಪ ವಾಸು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿ ಸೋಮು ಇಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ. ಚುನಾವಣಾಧಿಕಾರಿ ಭರತ್ ಕುಮಾರ್ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಸಹನಾ.ಕೆ ಕಾರ್ಯ ನಿರ್ವಹಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಸಂಘದ ನೂತನ ಅಧ್ಯಕ್ಷೆ ರೂಪ ವಾಸು ಹಾಲು ಉತ್ಪಾದಕ ಸಂಘವನ್ನು ಮಾದರಿ ಸಂಘವಾಗಿ ರೂಪಿಸಲು ಶ್ರಮವಹಿಸುತ್ತೇನೆ.ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಸಂಘದ ಅಧ್ಯಕ್ಷ ನಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿಯ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಯುವ ಮುಖಂಡ ಕೊಮ್ಮೆನಹಳ್ಳಿ ಅನಿಲ್ ಕುಮಾರ್ ಸಂಘಕ್ಕೆ ನಡೆದ ಚುನಾವಣೆ ಯಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಅವಿರೋಧ ಆಯ್ಕೆ ಮಾಡಲು ಸಹಕಾರ ನೀಡಿದ್ದಾರೆ. ಅದರಂತೆ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧ ವಾಗಿ ಆಯ್ಕೆ ಮಾಡಿಕೊಳ್ಳಲಾಯಿತು .ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಾ,ಎಲ್ಲಾ ಸದಸ್ಯರಿಗೆ ಯಶಸ್ವಿನಿ ಯೋಜನೆ ಯನ್ನು ಮಾಡಿಸಿ ಆರೋಗ್ಯ ಕಾಪಾಡಿ ಕೊಳ್ಳಲು ಹೆಚ್ಚಿನ ಅರಿವು ಮೂಡಿಸಿ ಬೇಕು ಪ್ರತಿ ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ರಾದ ರೇಣುಕಾ ಶ್ರೀನಿವಾಸ್, ಜ್ಯೋತಿ ಸುರೇಶ, ಪ್ರೇಮಾ ರಘುನಾಥ್, ಸುಧಾ ಶಿವಕುಮಾರ್, ಜ್ಯೋತಿ ಜವರೇಗೌಡ, ಭಾಗ್ಯ ರಾಮೇಗೌಡ, ರಾಧಾ ನಾಗರಾಜು,ಕಾರ್ಯದರ್ಶಿ ಸಹನಾ ಕೆ.ಗ್ರಾ.ಪಂ ಸದಸ್ಯ ನಾಗೇಗೌಡ,ಮಾಜಿ ಸದಸ್ಯ ಕೆ. ಬಿ ಜಗದೀಶ್,ಹಿರಿಯ ಮುಖಂಡ ಶಿವೇಗೌಡ, ಹರಿಹರಪುರ ಶ್ರೀಧರ್, ನಾಗೇಗೌಡ, ರಘುನಾಥ್, ರಾಮೇಗೌಡ, ಮಂಜುನಾಥ್, ಕೆ.ಬಿ ಸುರೇಶ, ಸೋಮು, ಮಂಜುನಾಥ್ ಕೆ.ಹೆಚ್, ಕುಮಾರ್,ಯುವ ಮುಖಂಡ ರಾದ ಕೊಮ್ಮೆನಹಳ್ಳಿ ಕೌಶಿಕ್, ಧನುಷ್, ಸುನಿಲ್, ಗಿರೀಶ್, ನಾಗೇಂದ್ರ, ಸೇರಿದಂತೆ ಅನೇಕರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ.ಆರ್.ಪೇಟೆ ವರದಿ