ಐದು ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಕರಡಿ ಕಡೆಗೂ ಸೆರೆ

ವಿಜಯ ಸಂಘರ್ಷ 
ಭದ್ರಾವತಿ: ಕೆಲ ದಿನಗಳಿಂದ ಆತಂಕ ಸೃಷ್ಟಿಸಿದ್ದ ಕರಡಿಯೊಂದು ಭಾನುವಾರ ಸೆರೆಯಾಗಿದೆ.

ತಾಲೂಕಿನ ತಟ್ಟೆಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಆವರಣ ದಲ್ಲಿ ಇರಿಸಿದ್ದ ಬೋನಿಗೆ ಕರಡಿ ಸೆರೆಯಾಗಿದೆ. ಕರಡಿ ಉಪಟಳದಿಂದ ಸಂಕಷ್ಟ ಅನುಭವಿಸಿದ್ದ ಸುತ್ತಮುತ್ತ ಲಿನ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನ ಹಳ್ಳಿ, ತಿಮ್ಲಾಪುರ ಕ್ಯಾಂಪ್ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕರಡಿ ಆತಂಕಕ್ಕೆ ಕಾರಣವಾಗಿತ್ತು.

ಕರಡಿ ಬೋನಿಗೆ ಬಿದ್ದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸೆರೆಯಾದ ಕರಡಿ ನೋಡಲು ಜನ ಮುಗಿಬಿದ್ದು, ಸಾಲುಗಟ್ಟಿ ನಿಂತಿದ್ದಾರೆ. ಜನರನ್ನು ನಿಯಂತ್ರಿಸಲು ಅರಣ್ಯಾಧಿಕಾರಿ ಗಳು ಹರಸಾಹಸ ಪಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು