ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ

ವಿಜಯ ಸಂಘರ್ಷ 
ಭದ್ರಾವತಿ: ಹಳೇನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ ಸೆ: 8ರಂದು ನಡೆಯಲಿದೆ. 

ನವ ದಿನಗಳ ಆಧ್ಯಾತ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗುತ್ತಿದೆ. ಭಕ್ತರಿಂದ ಕೋರಿಕೆ, ಹರಕೆಗಳು, ವಿವಿಧ ಉದ್ದೇಶ ಗಳಿಗಾಗಿ ಪ್ರಾರ್ಥನೆ, ಮಾತೆಯ ಮೆರವಣಿಗೆ ಮತ್ತು ಪುಷ್ಪಾರ್ಚನೆ ನಡೆಯುತ್ತವೆ. 

ಆ. 29ರ ಗುರುವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಫ್ಯಾನ್ಸಿಸ್ ಸೆರಾವೋ ಅವರಿಂದ ಮಹೋತ್ಸವದ ಚಾಲನೆಯ ಸಂಕೇತವಾಗಿ ಧ್ವಜಾ ರೋಹಣ ಮತ್ತು ಪೂಜಾ ವಿಧಿ-ವಿಧಾನಗಳು ನಡೆಯುತ್ತವೆ. ಅಂದಿನಿಂದ ಸತತ 9 ದಿನ 
ದಿನಕ್ಕೊಂದು ವಿಷಯ ಮುಂದಿಟ್ಟು ಪ್ರಾರ್ಥಿಸಲಾಗುವುದು. 

ಸೆ. 7ರಂದು ಸಂಜೆ ನಗರದ ಮುಖ್ಯ ಬೀದಿ ಗಳಲ್ಲಿ ಭವ್ಯ ಅಲಂಕೃತ ತೇರಿನ ಮೆರವಣಿಗೆ ನಡೆಸಲಾಗುವುದು. ಸೆ. 8ರಂದು ಮಾತೆಯ ಜನ್ಮದಿನ ಹಾಗೂ ದೇವಾಲಯದ ವಾರ್ಷಿಕೋತ್ಸವದ ಇದ್ದು, ಅಂದು ಬೆಳಿಗ್ಗೆ 7 ಗಂಟೆ ಯಿಂದಲೇ ವಿವಿಧ ಪೂಜೆಗಳು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಧರ್ಮಾಧ್ಯಕ್ಷರಿಂದ ಮತ್ತೆ ಶ್ರದ್ಧಾಭಕ್ತಿ ಯಿಂದ ಪೂಜೆ ನಡೆಯಲಿದೆ.

ಆ. 29ರಿಂದಲೇ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ. ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಳಿರು- ತೋರಣ, ದೀಪಾಲಂಕಾರ ಶುರುವಾಗಲಿದೆ. ಹಬ್ಬದ ಶುಭಾಶಯದ ಫ್ಲೆಕ್ಸ್‌ಗಳ ಅಳವಡಿಕೆ, ತಿಂಡಿ ಅಂಗಡಿ, ಮಕ್ಕಳ ಆಟಿಕೆ ವಸ್ತುಗಳು, ಮಹಿಳೆಯರ ಉಡುಗೆ- ತೊಡುಗೆ, ಅಂಗಡಿಗಳು ತೆರೆದುಕೊಳ್ಳುತ್ತವೆ. 

ಜಾತ್ರಾ ಮಹೋತ್ಸವದ ದಿನ ಊಟದ ವ್ಯವಸ್ಥೆ, ಹರಕೆ ಸಾಮಾನುಗಳ ಮಾರಾಟ, ಹರಕೆಯ ಕೇಶ ಮುಂಡನ, ಚಿಕ್ಕ ಮಕ್ಕಳಿಗೆ ಕಿವಿ ಚುಚ್ಚುವುದು, ವಿಶೇಷವಾಗಿ ಅಲಂಕೃತ ಗೊಂಡ ಮಾತೆಯ ಪ್ರತಿಮೆ ಪೂಜೆ, ದೂರದ ಊರುಗಳಿಂದ ಪ್ರಾರ್ಥನೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯದ ವ್ಯವಸ್ಥೆ, ವಾದ್ಯ ಮೇಳ ಮತ್ತು ದೇವಾಲಯದ ಆವರಣದ ತುಂಬೆಲ್ಲ ಅಲಂಕೃತ ದೀಪಗಳು ಕಂಗೊಳಿಸುತ್ತಿರುತ್ತವೆ.

ಪ್ರತಿ ವರ್ಷವೂ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಲಿದ್ದು, ಧರ್ಮ ಗುರುಗಳು, ಧರ್ಮ ಭಗಿನಿ ಯರು ಮತ್ತು ಧರ್ಮ ಕೇಂದ್ರದ ಪದಾಧಿಕಾರಿಗಳು ಭಕ್ತರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂದು ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು