ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಿ

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಗ್ರಾಮದ ಸೊಸೈಟಿ ಆವರಣದಲ್ಲಿ ಸಂಘದ ಅಧ್ಯಕ್ಷೆ ಆಶಾ ದೇವರಾಜು ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು ಸಂಘಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಸಹಕಾರ ತತ್ವದ ಉದ್ದೇಶ ಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳ ಬೇಕು. ಸಹಕಾರ ಸಂಘದಲ್ಲಿ ಯಾರೂ ಸಹ ಯಾವುದೇ ವೈಯಕ್ತಿಕ ಲಾಭ ಪಡೆಯಲು ಪ್ರಯತ್ನಿಸಬಾರದು. ಸೇವಾ ಭಾವನೆ ಯಿಂದ ಕೆಲಸ ಮಾಡುವುದ ರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ ಆದ್ದರಿಂದ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸರ್ಕಾರ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಿ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ರೈತರು ವ್ಯವಸಾಯದ ಜತೆಗೆ ವ್ಯವಸಾಯೇತರ ಚಟುವಟಿಕೆಗಳನ್ನು ಕೈಗೊಂಡರೆ ಆರ್ಥಿಕ ಸಬಲರಾಗುತ್ತಾರೆ ಎಂದರು ಹಣವನ್ನು ನೀರಿನಂತೆ ಗಳಿಸಬೇಕು ತೀರ್ಥದಂತೆ ಬಳಸಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿದರು.

2023-24 ನೇ ಸಾಲಿನ ಆಡಿಟ್ ವರದಿ ಮಂಡಿಸಿ ವಾರ್ಷಿಕ ವರದಿ ಪರಿಗಣಿಸಲಾಯಿತು. ಕಾರ್ಯನಿರ್ವಹಣಾ ನ್ಯೂನತೆ ಕುರಿತು ಚರ್ಚಿಸಲಾಯಿತು.ರಸಗೊಬ್ಬರ ಸೇರಿದಂತೆ ನಾನಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಸಂಘವನ್ನು ಅಭಿವದ್ಧಿ ಪಥದತ್ತ ಸಾಗಿಸಲು ಸದಸ್ಯರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಆಶಾ ದೇವರಾಜು,ಉಪಾಧ್ಯಕ್ಷ ನಾಗೇಗೌಡ, ನಿರ್ದೇಶಕರಾದ ಎಂ.ಸಂಜೀವಪ್ಪ, ಡಿ.ಸುರೇಶ್, ಮಹದೇವಪ್ಪ, ಎ.ಟಿ ಕರಿಶೆಟ್ಟಿ, ಎ.ಎಂ ಪುಟ್ಟಶೆಟ್ಟಿ, ಜಿ.ಎಸ್ ಕುಮಾರ್,ಶಾಂತಮ್ಮ ಕೃಷ್ಣೆಗೌಡ, ರಾಜನಾಯಕ,ರಾಜೇಗೌಡ ,ಗ್ರಾ.ಪಂ ಅಧ್ಯಕ್ಷ ಕರಿಶೆಟ್ಟಿ,ಉಪಾಧ್ಯಕ್ಷ ಇಶ್ರತ್ ಉನ್ನಿಸ್,ಸದಸ್ಯ ಎ.ರಾಜು, ಮುಖಂಡ ರಾಯಪ್ಪ, ಗುಡುಗನಹಳ್ಳಿ ಶ್ರೀನಿವಾಸ್,ಎಂ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಗಿರಿವರ್ಧನ್,ಎಲ್.ಜೆ ದೇವಕುಮಾರ್, ಮೇಲ್ವಿಚಾರಕರಾದ ಜೆ.ಆರ್ ಜಲೇಂದ್ರ.ಕೆ.ಆರ್ ರಘು, ರಾಘವೇಂದ್ರ,ಆದಿಲ್ ಪಾಷ, ಸಂಘದ ಕಾರ್ಯದರ್ಶಿ ಕಾಳೇಗೌಡ ಗುಮಾಸ್ತ ಎ.ಜೆ ಧರ್ಮ, ನಾಗಮಣಿ, ಸಹಾಯಕಿ ರಾಣಿ, ಪೀರ್ ಖಾನ್ ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು