ವಿಜಯ ಸಂಘರ್ಷ
ಹೊಸನಗರ: ಸಾಮಾನ್ಯವಾಗಿ ಸರ್ಕಾರಿ ನೌಕರಿಯಲ್ಲಿ ವಯೋ ನಿವೃತ್ತಿಯಾದ ವರಿಗೆ ಸನ್ಮಾನ ಮಾಡಿ ಮನೆಗೆ ಕಳುಹಿಸುವುದು ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಕಂದಾಯ ಇಲಾಖೆಯ ಗ್ರಾಮಾಡಳಿತಾಧಿ ಕಾರಿಯೊಬ್ಬರು ನಿವೃತ್ತಿಯಾದ ಹಿನ್ನಲೆ ತಮ್ಮ ವಾಹನದಲ್ಲಿ ಅವರನ್ನು ಸ್ವತಃ ತಾವೇ ಡ್ರೈವ್ ಮಾಡುವ ಮೂಲಕ ಡ್ರಾಪ್ ನೀಡಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಸ್.ವಿ.ಸದಾಶಿವಪ್ಪ ಆ.31 ವಯೋನಿವೃತ್ತಿ ಹೊಂದಿದರು. ಸದಾಶಿವಪ್ಪ ಅವರಿಗೆ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಅವರು ತಾವು ತಾಲೂಕು ಆಡಳಿತಾಧಿ ಕಾರಿ ಆಗಿದ್ದರೂ ತಮ್ಮ ವಾಹನದಲ್ಲಿ ಸದಾಶಿವಪ್ಪರನ್ನು ಇಲಾಖೆಯ ವಾಹನ ದಲ್ಲಿ ಕೂರಿಸಿಕೊಂಡು ಅವರ ಮನೆಗೆ ತಾವೇ ಡ್ರೈವ್ ಮಾಡಿಕೊಂಡು ಬಿಟ್ಟು ಬರುವ ಮೂಲಕ ಮಾದರಿ ಅಧಿಕಾರಿ ಯಾಗಿದ್ದಾರೆ.
ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.