ಕ್ರಿಯಾಶೀಲತೆ ಬೆಳೆಯಲು ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ

ವಿಜಯ ಸಂಘರ್ಷ 
ಭದ್ರಾವತಿ: ದಾರಿ ತಪ್ಪುತ್ತಿರುವ ಇಂದಿನ ಯುವ ಪೀಳಿಗೆಗೆ ಶ್ರಾವಣ ಮಾಸ ಆಚರಣೆ ಸಹಕಾರಿಯಾಗಿದ್ದು, ಇಂತಹ ಆಚರಣೆಗಳ ಮಹತ್ವ ತಿಳಿಸಿಕೊಡುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು. 

ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಆಯೋಜಿಸ ಲಾಗಿದ್ದ ಶ್ರಾವಣ ಸಂಭ್ರಮ-ಗಾಯನ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಆಶಯನುಡಿಗಳನ್ನಾಡಿದರು.

ಆಧುನಿಕತೆ ಬೆಳದಂತೆ ನಮ್ಮ ಕ್ರಿಯಾ ಶೀಲವಾದ ಬದುಕು ದೂರವಾಗುತ್ತಿದೆ. ನಮ್ಮ ಭವಿಷ್ಯದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ನಮ್ಮಲ್ಲಿ ಕ್ರಿಯಾಶೀಲತೆ ಬೆಳೆಯಲು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಶ್ರಾವಣ ಮಾಸ ಆಚರಣೆ ಕೈಗೊಳ್ಳಲಾಗುತ್ತಿದ್ದು, ಇದರ ಮಹತ್ವ ನಾವುಗಳು ತಿಳಿದುಕೊಳ್ಳ ಬೇಕಾಗಿದೆ ಎಂದರು.

ಉದ್ಯಮಿ ಬಿ.ಕೆ.ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್ಎಸ್, ಸದಸ್ಯರಾದ ನಾಗರತ್ನ ಅನಿಲ್ ಕುಮಾರ್, ಅನುಪಮಾ ಚನ್ನೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ರೋಟರಿ ಕ್ಲಬ್ ಅಧ್ಯಕ್ಷ
ಜಿ.ರಾಘವೇಂದ್ರ ಉಪಾಧ್ಯಾಯ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆ ಕಾರ್ಯದರ್ಶಿ ಉಮಾಪತಿ ಸ್ವಾಗತಿಸಿ, ಸುಮತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ, ಮಹಾದೇಶ್ವರ, ಸಾಯಿ ಮಂದಿರ, ಶಿರಡಿ ಸಾಯಿಬಾಬಾ, ಬನಶಂಕರಿ ಗಾಯನ, ಭೂಮಿಕ ವೇದಿಕೆ, ಕದಳಿ ವೇದಿಕೆ, ಚುಂಚಾದ್ರಿ ಮಹಿಳಾ ವೇದಿಕೆ, ಉಮಾ ಭಜನಾ, ಸ್ನೇಹ ಮಿಲನ, ತಾಲೂಕು ವೀರಶೈವ ಲಿಂಗಾಯತ, ಚೌಡೇಶ್ವರಿ ದೇವಸ್ಥಾನ, ಕಣಿವೆಮಾರಿಯಮ್ಮ, ಬಲಮುರಿ ಗಣಪತಿ, ಲಕ್ಷ್ಮೀ ವೆಂಕಟೇಶ್ವರ ಭಜನಾ, ಆಂಜನೇಯ ಮತ್ತು ಶ್ರೀ ವೀರಾಂಜ ನೇಯ ತಂಡ ಸೇರಿದಂತೆ ಸುಮಾರು 19 ಮಹಿಳಾ ತಂಡಗಳು ಶ್ರಾವಣ ಸಂಭ್ರಮ-ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು