ಇತಿಹಾಸ ನೆನಪಿಸುವ ದಾಖಲೆಗೆ ಛಾಯಾ ಚಿತ್ರದ ಪಾತ್ರ ಮಹತ್ವ: ಮಲ್ಲಿಕಾರ್ಜುನ್

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ಚಿತ್ರಗಳ ಮೂಲಕ ಇತಿಹಾಸ ನೆನಪಿಸುವ ಅಮೂಲ್ಯ ವೃತ್ತಿಯೇ ಛಾಯಾಗ್ರಾಹಣ. ಇಂದು ಛಾಯಾಗ್ರಾಹಕ ವೃತ್ತಿ ಅತ್ಯಂತ ಕಷ್ಟ ಮತ್ತು ಸವಾಲಿನದಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಂಭಾಂಗಣದಲ್ಲಿ ಕೆ.ಆರ್.ಪೇಟೆ ತಾಲೂಕು ಛಾಯಾ ಸಂಘದ ವತಿಯಿಂದ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಪೂರ್ವ ಬದುಕುಗಳನ್ನು ಇಂದು ಪೋಟೋ ಹಾಗೂ ವಿಡಿಯೋಗಳ ಮೂಲಕ ನೋಡಿ ತಿಳಿದುಕೊಳ್ಳಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ನಲೇ ಕ್ಯಾಮರಾ ಇರುವುದರಿಂದ ಜನ ಸಾಮಾನ್ಯರು ತಮ್ಮ ಮೊಬೈಲ್ನಲೇ ಪೋಟೋ ತೆಗೆದುಕೊಳ್ಳುತ್ತಿದ್ದು, ಛಾಯಾಗ್ರಾಹಕರ ಕೆಲಸಕ್ಕೆ ಕತ್ತರಿ ಬಿಳುವ ಸಾಧ್ಯತೆಗಳಿದೆ.ಛಾಯಾಗ್ರಾಹಕರು ತಾಳ್ಮೆ ಮತ್ತು ಪರಿಶ್ರಮದಿಂದ ವೃತ್ತಿಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಕಾಣ ಬಹುದು. ಇತಿಹಾಸ ನೆನಪಿಸುವ ದಾಖಲೆಗೆ ಛಾಯಾಚಿತ್ರದ ಪಾತ್ರ ಮಹತ್ವದಾಗಿದೆ.ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ಬುದ್ದಿವಂತಿಕೆ ಯಿಂದ ಛಾಯಾಚಿತ್ರ ಸೆರೆಹಿಡಿಯುವುದು ಒಂದು ಕಲೆ.ಛಾಯಾ ಗ್ರಾಹಕರನ್ನು ಆರ್ಥಿಕ ವಾಗಿ ಸಬಲರನ್ನಾಗಿ ಮಾಡುವ ಸಲುವಾಗಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ, ಅ ಜವಾಬ್ದಾರಿಯನ್ನ ಮುಂದಿನ ದಿನಗಳಲ್ಲಿ ಕಾಯಾ ವಾಚ ಮನಸ್ಸಿನಿಂದ ಮಾಡುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ ವೈಜ್ಞಾನಿಕ ಕ್ಷೇತ್ರ ಅಭಿವೃದ್ಧಿ ಹೊಂದಲು ಛಾಯಾಚಿತ್ರದ ಕೊಡುಗೆ ಅಪಾರವಾಗಿದೆ ಪ್ರತಿಯೊಬ್ಬ ಛಾಯಾಗ್ರಾಹಕನಿಗೆ ಉತ್ತಮ ಕಲಾ ಹಾಗೂ ಪರಿಸರ ಪ್ರೀತಿಯ ಜ್ಞಾನವಿದ್ದರೆ ಸುಂದರ ಪೋಟೋ ತೆಗೆಯಲು ಸಾಧ್ಯ ಪ್ರತಿಯೊಬ್ಬರು ತಮ್ಮ ವೃತ್ತಿ ಗೌರವಿಸಿ ಸಂಘಟನೆಯ ಮೂಲಕ ಸದೃಢ ವಾದರೆ ಮಾತ್ರ ಮುಖ್ಯ ವಾಹಿನಿಯಲ್ಲಿ ಬರಲು ಸಾಧ್ಯ.ಸಂಘಟನೆಯ ಸರ್ವ ಪದಾಧಿಕಾರಿಗಳು ಒಗ್ಗಟಿನಿಂದ ಛಾಯಾ ಸಂಘವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು.ಛಾಯಾಗ್ರಾಹಕ ತಮ್ಮ ಹೊಳಗಿಗೆ ಎಷ್ಟೇ ನೋವಿದ್ದರೂ ಸಹ ಇನ್ನೊಬ್ಬರ ಖುಷಿ ಕ್ಷಣಗಳ ಪೋಟೋ ಅನ್ನು ತೆಗೆದು ಹಳೆಯ ನೆನಪುಗಳನ್ನು ಉಳಿಯುವುವಂತೆ ಮಾಡುತ್ತಾರೆ ಎಂದರು.

ಟಿ.ಎ.ಪಿ ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು ಹಿರಿಯ ಛಾಯಗ್ರಾಹಕರಿಗೆ ಹಾಗೂ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗ ವಹಿಸಿ ಜಯಗಳಿಸಿದವರಿಗೆ ಸಮಗ್ರ ಪ್ರಶಸ್ತಿ ಸನ್ಮಾನಿಸುವ ಮೂಲಕ ಗೌರವಿಸಿದರು.

ಕಾರ್ಯಕ್ರಮದಲ್ಲಿ ಫೋಟೋಗ್ರಾಫಿ ಕಾರ್ಯಗಾರ ಗಿರಿ ಮಂಜು ಅವರಿಂದ ಮಿರರ್ ಲೇಸ್ ಕ್ಯಾಮೆರಾದ ಪ್ರಸ್ತುತ ತಂತ್ರಜ್ಞಾನಗಳ ಬಗ್ಗೆ ಸಂಘದ ಛಾಯಾ
ಗ್ರಾಹಕರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಂಡ್ಯ ವೃತ್ತಿಪರ ಛಾಯಾಗ್ರಹಕರ ಸಂಘದ ಅಧ್ಯಕ್ಷ ವಿನೋದ್, ಪಾಂಡುಪುರ ಮಧು, ಶ್ರವಣಬೆಳಗೊಳ ಅಧ್ಯಕ್ಷ ಪ್ರದೀಪ್, ಕೆ.ಆರ್ ಪೇಟೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗೌಡ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಮಣಿಕಂಠ ಜಿ.ಕೆ, ಉಪಾಧ್ಯಕ್ಷ ನಾಗೇಶ್. ಜಿ, ಖಜಾಂಚಿ ರವಿ , ಸಂಘಟನಾ ಕಾರ್ಯದರ್ಶಿ ಮಂಜುನಾಥ, ಸಹಕಾರಿದರ್ಶಿ ರವಿ, ನಿರ್ದೇಶಕರಾದ ಮಂಜು ಎನ್.ಜೆ, ಈರಪ್ಪಾಜಿ, ರಾಜು ಅಭಿಜಿತ್,ಸುಂದರ್, ಸಾಗರ್ ಸುನಿಲ್, ಹಿರಿಯ ಛಾಯಾಗ್ರಾಹಕ ರಾದ ಶಂಕರ್ ಶ್ರೀಧರ್ ಗಂಗಾಧರ್ ದಯಾನಂದ ನಾರಾಯಣ ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನುಮಾಕವಳ್ಳಿ 
ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು