ಕಡವೆ ಭೇಟೆ: ನಾಲ್ವರ ಅರೆಸ್ಟ್

ವಿಜಯ ಸಂಘರ್ಷ 
ಭದ್ರಾವತಿ: ಉಂಬ್ಳೆಬೈಲು ರೇಂಜ್ ನ ಚೌಡಿಕಟ್ಟೆಯ ಬಳಿ ಕಡವೆ ಪ್ರಾಣಿ ಯನ್ನು ಶಿಕಾರಿ ಮಾಡಿದ ನಾಲ್ವರನ್ನ ಅರಣ್ಯ ಇಲಾಖೆ ಯವರು ಬಂಧಿಸಿ, ನ್ಯಾಯಾಂಗ ಬಂಧನ ಕೊಳ ಪಡಿಸಿದ್ದಾರೆ. 

ಕಡವೆ ಬೇಟೆಯಾಡಿ ತಲೆಯನ್ನ ಕೆರೆಗೆ ಬಿಸಾಕಿ ಹೋಗಿದ್ದಾಗ ಅರಣ್ಯ ಇಲಾಖೆಯವರೆ ಕಣ್ಣಿಗೆ ಬಿದ್ದಿದೆ. ಬೇಟೆಯಾಡಿದ ಕಡಿವೆಯನ್ನ ರುಂಡವನ್ನ ಛೇಧಿಸಿ ಮಾಂಸವನ್ನ ಕೊಯ್ದು ಕೊಂಡು ತಲೆಯನ್ನ ಕೆರೆಗೆ ಬಿಸಾಕಲಾಗಿತ್ತು.

ವನ್ಯಜೀವಿ ಬೇಟೆಯಾಡಿದ ಪ್ರಕರಣದ ಅಡಿಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಗೊಂದಿ ಗ್ರಾಮದ ಶಿವ ಬಿನ್ ರಾಜಪ್ಪ,(28), ವೆಂಕಟೇಶ ಬಿನ್ ಮುನಿಯಪ್ಪ, (60), ಎನ್ ಆರ್ ಪುರ ತಾಲ್ಲೂಕಿನ ಮಂಜಪ್ಪ ಬಿನ್ ನಾಗಪ್ಪ, (45) ವಿನೋದ ಬಿನ್ ಮಂಜಪ್ಪ ಸಿ,( 19), ರವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್ ನ್ನ‌ವಶಕ್ಕೆ ಪಡೆಯಲಾಗಿದೆ.‌

ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಚರಣೆಯಲ್ಲಿ ಭದ್ರಾವತಿ ಡಿಸಿಎಫ್ ಆಶೀಶ್ ರೆಡ್ಡಿ, ಎಸಿಎಫ್ ರತ್ನಪ್ರಭ ರವರ ಮಾರ್ಗದರ್ಶನದಲ್ಲಿ ಆರ್ ಎಫ್ ಒ ಗಿಡ್ಡಸ್ವಾಮಿ, ಡಿ ಆರ್ ಎಫ್ ಓ ಪವನ್ , ಸಂಜು ಬಿಎಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು