ವಿಜಯ ಸಂಘರ್ಷ
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಾಪುರ ಪೋಲಿಸ್ ಠಾಣಾ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಪಿಎಸ್ ಐ ರಾಜಶೇಖರ್ ರಾಥೋಡ್ ಈ ಸಂದರ್ಭದಲ್ಲಿ ಮಾತನಾಡಿ, ಎಲ್ಲರೂ ಒಗ್ಗಟ್ಟಿ ನಿಂದ ಹಬ್ಬ ಆಚರಿಸುವಂತಾಗಬೇಕು.ಆಗ ಮಾತ್ರ ಹಬ್ಬಗಳ ಆಚರಣೆ ಸಾರ್ಥಕ ವಾಗುತ್ತದೆ. ಹಬ್ಬಗಳ ಆಚರಣೆ ಮೂಲಕ ನಮ್ಮ ಮಕ್ಕಳಿಗೆ ನಾವು ಯಾವ ರೀತಿ ಸಂದೇಶ ನೀಡುತ್ತೇವೆ ಎಂಬುದು ಸಹ ಅವಲಂಬಿತವಾಗಿರುತ್ತದೆ. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಶಾಂತಿ ಯುತವಾಗಿ ಹಬ್ಬ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದರು.
ಅಹಿತಕರ ಚಟುವಟಿಗೆ ಕಂಡಲ್ಲಿ ತಕ್ಷಣ ಪೋಲಿಸರ ಗಮನಕ್ಕೆ ತರುವಂತೆ ತಿಳಿಸಿದರು.ಸಭೆಯಲ್ಲಿ ಗ್ರಾಮದ ಮುಖಂಡರು, ಸೇರಿದಂತೆ ಅನೇಕರಿದ್ದರು.
( ✍️ ಶಿವು ರಾಠೋಡ್ ಯಾದಗಿರಿ )
Tags:
ಯಾದಗಿರಿ ನಾರಾಯಣಪುರ ಸುದ್ದಿ