ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸ್ವಚ್ಛ ಭಾರತ ಅಭಿಯಾನ- 2024 ಅಂಗವಾಗಿ ಸ್ಥಳದಲ್ಲಿ ಕುಳಿತು ಚಿತ್ರ ಬರೆಯುವ ಸ್ಫರ್ಧೆ 'ಸ್ವಚ್ಛತಾ ಹಿ ಸೇವಾ-2024 ಅಭಿಯಾನ’ ಅಂಗ ವಾಗಿ, ಸೈಲ್ ಅಂಗ ಸಂಸ್ಥೆ ನಗರದ ಸರ್.ಎಂ.ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರವು ತಾಲ್ಲೂಕಿನ ವಿದ್ಯಾರ್ಥಿಗಳಿಗಾಗಿ ‘ನನ್ನ ಕನಸ್ಸಿನ ಸ್ವಚ್ಛ ಭದ್ರಾವತಿ’ ವಿಷಯವಾಧರಿಸಿದ ಚಿತ್ರ ಬರೆಯುವ ಸ್ಪರ್ದೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೆಶಕ ಬಿ.ಎಲ್. ಚಂದ್ವಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ಸಹಚರರು ಈ ಅಭ್ಯಾಸವನ್ನು ರೂಢಿಸಿ ಕೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿ, ಸ್ವಚ್ಛತೆಯ ಪ್ರತಿಜ್ಞೆಯನ್ನು ಬೋಧಿಸಿದರೆ. ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕನ್ನಡಕ್ಕೆ ಅನುವಾದಿಸಿದರು.
ಪರಿಸರ ನಿರ್ವಹಣಾ ವಿಭಾಗದ ಮಹಾ ಪ್ರಬಂಧಕ ಮುತ್ತಣ್ಣ ಸುಬ್ಬರಾವ್
ಸ್ವಚ್ಛತೆಯು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.
ಕಾರ್ಖಾನೆಯ ಅಧಿಕಾರಿಗಳಾದ ಹರಿಕೃಷ್ಣ ಗುಡೆ, ವಿಕಾಸ್ ಬಸೇರ್ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ, ನಗರಾಡಳಿತ ಮತ್ತು ಭದ್ರತಾ ಇಲಾಖೆಗಳು ಆಯೋಜಿಸಿದ್ದವು.
ಇದೆ ಸಂದರ್ಭದಲ್ಲಿ ಆಸಕ್ತ ಪೋಷಕ ರಿಗೆ ನೂರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲಾಯಿತು. ತಾಲ್ಲೂಕಿನ 1ನೇ ತರಗತಿ ಯಿಂದ 10 ನೇ ತರಗತಿಯ 425 ವಿದ್ಯಾರ್ಥಿಗಳು ತಮ್ಮ ಕನಸಿನ ಸ್ವಚ್ಛ ಭದ್ರಾವತಿಯ ಕಲಾತ್ಮಕ ಚಿತ್ರಣ ಮೂಡಿಸಿದರು.