ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಂದೆ-ತಾಯಿ, ಹಿರಿಯರನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅನಾಥ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆತ್ಮಸ್ಥೈರ್ಯದ ಜೊತೆಗೆ ಆರ್ಥಿಕ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ.
ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಪಂಚಾಯಿತಿಯಲ್ಲಿ ಕಳೆದ ಒಂದು ವರ್ಷದಿಂದ ನೀರುಗಂಟಿ ಯಾಗಿ ಕೆಲಸ ಮಾಡುತ್ತಿದ್ದ ಬಳ್ಳಕೆರೆ ಗಿರಿಜಾ ಮಹಾದೇವ (34) ಕಳೆದ ವಾರ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ ಮಾನವ ಸರಪಳಿ ಮುಗಿಸಿ ನೀರಗಂಟಿ ಪ್ರಭಾವತಿ ಸ್ವಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಪಟ್ಟ ಮೃತ ಗಿರಿಜಾ ಮಹದೇವ. ಅವರ ಪತಿ ಮಹದೇವ ಕಳೆದ ವರ್ಷ ತೀವ್ರ ಅನಾರೋಗ್ಯಕ್ಕೆ ಅಕಾಲಿಕವಾಗಿ ನಿಧನರಾಗಿ.4 ತಿಂಗಳ ಹಿಂದೆ ಅಜ್ಜಿ ಭಾಗ್ಯಮ್ಮ,ದೊಡ್ಡಪ್ಪ ಕೂಡ ಸಾವಿಗೀಡಾಗಿದ್ದಾರೆ.
ಒಂದೇ ವರ್ಷದಲ್ಲಿ ಮೂರು ಜನ ಮೃತಪಟ್ಟು ಸೂತಕ ಮಾಸದೆ ದುಃಖದ ಮಡಿವಿನಲ್ಲಿ ಅನುಕಂಪದ ಆಧಾರದ ಮೇಲೆ ನೀರುಗಂಟಿ ಕೆಲಸ ನಿರ್ವಹಿಸುತ್ತಾ ಕುಟುಂಬದ ಆಧಾರ ಸ್ತಂಭವಾಗಿದ್ದ ಅನಿತಾ ರವರು ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟು ಅವರ ಮಗ ಸಿದ್ದಾರ್ಥ್, ಮಗಳು ಸುಕನ್ಯ ಇಬ್ಬರು ಮಕ್ಕಳು ತಂದೆ, ತಾಯಿ,ಅಜ್ಜಿ,ದೊಡ್ಡಪ್ಪ, ಅವರನ್ನ ಕಳೆದುಕೊಂಡು ಅನಾಥರಾಗಿರುವ ಹಿನ್ನಲೆಯಲ್ಲಿ,ಇಂದು ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಮೃತರ ಮನೆಗೆ ಭೇಟಿ ನೀಡಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯದ ಜೊತೆಗೆ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರ ಮುಖಾಂತರ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಸವಿತಾ ಇಂದ್ರೇಶ್,ಶಾಲಾ ಮುಖ್ಯ ಶಿಕ್ಷಕ ನಿಂಗೇಗೌಡ, ಸಹ ಶಿಕ್ಷಕರಾದ ಮಹೇಶ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ರಾಧ, ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಹರೀಶ್ ಉಪಾಧ್ಯಕ್ಷ ನರಸಿಂಹರಾಜು,ಸದಸ್ಯರಾದ ಶಿವಕುಮಾರ್,ಶಿವಮ್ಮ,ಮಲ್ಲೇಶ್,ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯಮ್ಮ,ಗ್ರಾಮಸ್ಥರುಗಳಾದ ಮಲ್ಲಪ್ಪ, ಸುಶೀಲಮ್ಮ,ವೀಣಾ, ಗಾಯತ್ರಮ್ಮ, ರತ್ನಮ್ಮ, ಸಣ್ಣಮ್ಮ, ದೇವಿರಮ್ಮ, ಮಣಿಯಮ್ಮ, ಕಾಂತಶೆಟ್ಟಿ,ಶಾಂತಮ್ಮ, ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ.ಆರ್. ಪೇಟೆ ವರದಿ