ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಹೆಬ್ಬಂಡಿ ಗ್ರಾಮದಲ್ಲಿ ಸ್ಮಶಾನಕ್ಕೆಂದು ಓಡಾಡಲು ಬಿಟ್ಟಿದ್ದ ದಾರಿ ಯನ್ನು ಕೆಲವು ಸ್ಥಳೀಯರು ಒತ್ತುವರಿ ಮಾಡಿಕೊಂಡು ಮುಚ್ಚಿ ಹಾಕಿದ್ದರು.ಇದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗಿತ್ತು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದಾರಿ ತೆರವುಗೊಳಿಸಬೇಕೆಂದು ತಾಲೂಕು ಆಡಳಿತಕ್ಕೆ ಮಾಡಿದ ಹೋರಾಟ ದಿಂದಾಗಿ ಜಂಟಿ ಸರ್ವೆ ನಡೆಸಿ ತೆರವು ಗೊಳಿಸಲಾಗಿದೆ.
ನಕಾಶೆಯಂತೆ ಹೆಬ್ಬಂಡಿ ಗ್ರಾಮ ಸರ್ವೇ ನಂಬರ್ 125/1ರಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದ್ದ 1.38 ಎಕರೆ ಭೂಮಿಗೆ ಇದ್ದ ದಾರಿಯನ್ನು ಕೆಲವರು ಒತ್ತುವರಿ ಮಾಡಿ ದಾರಿಯನ್ನು ಮುಚ್ಚಿ ಹಾಕಿದ್ದರು. ಶವ ಸಂಸ್ಕಾರಕ್ಕೆ ಬಹು ದೂರ ಸಾಗಿ ಸುತ್ತು ಹಾಕಿ ಬರಬೇಕಿತ್ತು.
ಗ್ರಾಮಸ್ಥರಿಗೆ ಶವ ಹೊತ್ತುಹೋಗುವುದರ ಜೊತೆಗೆ ಬಹುದೂರ ಸುತ್ತುವರಿದು ಬರುವುದು ಮತ್ತಷ್ಟು ತೊಂದರೆಯಾಗುತ್ತಿತ್ತು.
ಗ್ರಾಮಸ್ಥರ ದೂರಿನ್ವಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ ಜನವರಿಯಲ್ಲಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಲಾಗಿತ್ತು.ಆದರೂ ತೆರವು ಕಾರ್ಯ ಆಗದಿರುವುದರಿಂದ ಸಮಿತಿಯ ಪ್ರಧಾನ ಸಂಚಾಲಕ ಎಸ್.ಪುಟ್ಟರಾಜು ನೇತೃತ್ವದಲ್ಲಿ ಜಿಲ್ಲಾ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಶಿವಮೂರ್ತಿ, ಎಸ್ಸಿ,ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶೇಷಣ್ಣ ಹುಣಸೋಡು, ಜಿಲ್ಲಾ ವಿದ್ಯಾರ್ಥಿಗಳ ಒಕ್ಕೂಟದ ಎಸ್. ಗೋವಿಂದರಾಜು, ಶಿವಮೊಗ್ಗ ತಾಲೂಕು ಸಂಚಾಲಕ ಪರಮೇಶ್ ಸೂಗೂರು, ಕೂಡ್ಲಿಗೆರೆ ಚಂದ್ರು, ಅಣ್ಣಪ್ಪ, ರುದ್ರೇಶ್, ಮಲ್ಲೇಶ್, ನಾಗರತ್ನ, ವೀಣಾ, ಕಾವ್ಯ, ನಾಗರಾಜ್ ಮುಂತಾದವರ ನೇತೃತ್ವದಲ್ಲಿ ಹೋರಾಟ ನಡೆದಿತ್ತು.
ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು:
ಹೋರಾಟಕ್ಕೆ ಮಣಿದ ತಾಲೂಕು ಆಡಳಿತವು ಕಳೆದ ಆ: 28 ರಂದು ತಹಸೀಲ್ದಾರ್, ಕಂದಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ನಗರಸಭೆ ಅಧಿಕಾರಿಗಳು, ಸರ್ವೇ ಇಲಾಖೆ ಪೊಲೀಸ್ ಬಂದೋ ಬಸ್‌ನಲ್ಲಿ ಜಂಟಿ ಸರ್ವೇ ನಡೆಸಿ ಒತ್ತುವರಿ ಮಾಡಿದ್ದ ಸ್ಮಶಾನದ ದಾರಿಯನ್ನು ತೆರವುಗೊಳಿಸಿದೆ. ಇದರಿಂದ ಗ್ರಾಮಸ್ಥರಿಗೆ ಅಪಾರ ಸಂತಸವಾಗಿ ತೆರವಿ ಗಾಗಿ "ಶ್ರಮಿಸಿದ ಸಂಘಟನೆಗೆ ಹಾಗೂ ತಾಲೂಕು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರೆ, ಮುಖಂಡ ಪುಟ್ಟರಾಜು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಅಭಿನಂದಿಸಿದ್ದಾರೆ.
Tags:
ಭದ್ರಾವತಿ ದಸಂಸ ವರದಿ