ರೈತರು ಪಡೆದ ಸಾಲ ಸಕಾಲ ದಲ್ಲಿ ಮರು ಪಾವತಿಸಿ ಸಹಕಾರಿ ಅಭಿವೃದ್ಧಿಗೆ ನೆರವಾಗಿ:ಹೆಚ್.ಕೆ.ಅಶೋಕ್

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ರೈತರು ಪಡೆದ ಸಾಲ ಸಕಾಲದಲ್ಲಿ ಮರು ಪಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬೇಕು. ಸಹಕಾರ ತತ್ವ ಬದುಕಿನ ಭಾಗವಾಗ ಬೇಕು ಎಂದು ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್ ಹೇಳಿದರು.

ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳು ರೈತ ಸಮುದಾಯದ ಜೀವನಾಡಿ, ಸಹಕಾರಿ ಕ್ಷೇತ್ರವು ಬಹಳಷ್ಟು ವಿಸ್ತಾರವಾಗಿ ಬೆಳೆದಿದ್ದು ರೈತರ, ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ಬೆನ್ನೆಲು ಬಾಗಿ ನಿಂತಿದೆ. ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಾರಂಭದಿಂದಲೂ ರೈತರೊಂದಿಗೆ ಉತ್ತಮ ವ್ಯವಹಾರವನ್ನು ನಡೆಸಿ ಕೊಂಡು ಬಂದಿರುವ ಫಲವಾಗಿ ಜಿಲ್ಲಾ ಸಂಘದಿಂದ ಉತ್ತಮ ಪ್ರಶಸ್ತಿ ದೊರಕುವ ಮೂಲಕ ತಾಲೂಕಿನ ಇತರ ಸಹಕಾರಿ ಸಂಘಗಳಿಗೆ ಮಾದರಿ ಯಾಗಿದೆ. ಸಂಘವು ಬ್ಯಾಂಕಿಂಗ್ ವ್ಯವಹಾರ, ರಾಸಾಯನಿಕ ಗೊಬ್ಬರ ಹಾಗೂ ಪಡಿತರ ಸಾಮಗ್ರಿ ವಿತರಣೆಗೆ ಸೀಮಿತವಾಗಿರದೇ ಇತರ ಆರ್ಥಿಕ ಕ್ರೋಡೀಕರಣದಲ್ಲಿ ತೊಡಗಿಸಿ ಕೊಂಡು ಅಭಿವೃದ್ಧಿ ಪಥದತ್ತ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ರಾಜ್ಯ ಸಹಕಾರಿ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ ಯುವ ಸಮುದಾಯ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ಹಿರಿಯರು ಹಾಕಿಕೊಟ್ಟ ಸಹಕಾರ ಸಂಘ ಯುವ ಸಮುದಾಯ ದಿಂದ ಮತ್ತಷ್ಟು ಅಭಿವೃದ್ಧಿ ಹೊಂದ ಬೇಕಾಗಿದೆ. ರೈತರು ಸಂಘದ ಸೌಲಭ್ಯ ಗಳನ್ನು ಪಡೆದುಕೊಂಡು ಆರ್ಥಿಕತೆ ಯಿಂದ ಮುಂದುವರಿಯಬೇಕು. ಸಂಘದ ಚಟುಚಟಿಕೆಯಲ್ಲಿ ಪ್ರತಿ ಸದಸ್ಯನು ಭಾಗಿಯಾಗಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿ ಸಂಘದ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ನಗದು ರಹಿತ ವಹಿವಾಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಅನುಸರಿಸದೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ರೈತರು ವ್ಯವಹಾರ ನಡೆಸಬೇಕು. ಸಂಘದ ಚಟುವಟಿಕೆ ಯಲ್ಲಿ ಪ್ರತಿ ಸದಸ್ಯನು ಸಕ್ರಿಯವಾಗಿ ಪಾಲ್ಗೊಂಡು ಬ್ಯಾಂಕಿನ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಸಾರಂಗಿ ನಾಗರಾಜು (ನಾಗಣ್ಣ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ಸಂಘದ ನಿರ್ದೇಶಕ ರಾಗಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿ ಸಂಘದಿಂದ ಬಿಡುಗಡೆಗೊಂಡ ಭಾರತೀಯಪುರ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೊರಟಿಕೆರೆ ಕೆ.ಎಸ್ ದಿನೇಶ್, ಹಾಗೂ ಅಣ್ಣೇಚಾಕನಹಳ್ಳಿ ದೇವರಾಜು ಅಭಿನಂದಿಸಿ ಮಾತನಾಡುತ್ತಾ ಸರ್ಕಾರ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಿ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ರೈತರು ವ್ಯವಸಾಯದ ಜತೆಗೆ ವ್ಯವಸಾಯೇತರ ಚಟುವಟಿಕೆ ಗಳನ್ನು ಕೈಗೊಂಡರೆ ಆರ್ಥಿಕ ಸಬಲರಾಗುತ್ತಾರೆ ಎಂದರು.

ಸಭೆಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಕೆ.ಎಸ್. ದಿನೇಶ್ ಸಂಘದ ಅಧ್ಯಕ್ಷ ಸಾರಂಗಿ ನಾಗರಾಜು, ಉಪಾಧ್ಯಕ್ಷೆ ಪಾರ್ವತಮ್ಮ, ನಿರ್ದೇಶಕ ರಾದ ನಾಗೇಶ್,ರಾಜು, ನಂಜುಂಡೇ ಗೌಡ, ಅಶೋಕ್, ಕೆಂಪಮ್ಮ, ಗಂಗಾಧರ್, ಮೋಹನ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಹೇಮಾ ಹೊನ್ನೇಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೈಗೊನಾಹಳ್ಳಿ ಕುಮಾರ್,ಪ್ರಭಾರ ಕಾರ್ಯದರ್ಶಿ ಜಯರಾಜ, ಸಹಾಯಕಿ ಮೋನಿಕ, ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು