ವಿಜಯ ಸಂಘರ್ಷ
ಶಿವಮೊಗ್ಗ: ತಲೆಗೆ ಕೇಸರಿ ರುಮಾಲು ಧರಿಸಿದ ಯುವಕರು ತಮಟೆ, ಡೊಳ್ಳು, ಸದ್ದಿಗೆ ಸ್ಟೇಪ್ಸ್ ನೊಂದಿಗೆ ಗಣಪತಿ ಬಪ್ಪ ಮೋರಿಯಾ, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂಬ ಘೋಷಣೆ ಯೊಂದಿಗೆ,ಇಂದು ನಗರದ ಮೀನಾಕ್ಷಿ ಭವನಕ್ಕೆ ಗಣಪನನ್ನು ಕೊಂಡೊಯ್ಯಲು ನಾನಾ ಭಾಗಗಳಿಂದ ಟ್ಯ್ರಾಕ್ಟರ್, ಟೆಂಪೋ, ಆಟೋಗಳಲ್ಲಿ ಬಂದಿದ್ದ ಯುವ ಜನತೆಯ ಸಮೂಹವೇ ಸೇರಿತ್ತು.
ನಗರದ ಹಲವು ವೃತ್ತಗಳಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ಗಣಪನ ಖರೀದಿಯಲ್ಲಿ ಜನರು ತೊಡಗಿದ್ದರು. ಕೊರೋನಾ ನಂತರದ ದಿನಗಳಲ್ಲಿ, ಈ ಬಾರಿ ಗಣೇಶ ಮೂರ್ತಿ ಮಾರಾಟ ಹೆಚ್ಚಾಗಿದ್ದು,1 ಅಡಿಯಿಂದ 4 ಅಡಿಯವರೆಗಿನ ವಿಘ್ನೇಶ್ವರ ಮೂರ್ತಿಗಳ ಮಾರಾಟವಾಗುತ್ತಿದೆ.
ಹಲವು ರೂಪಗಳಲ್ಲಿರುವ ಗಣಪನನ್ನು ಖರೀದಿಸುತ್ತಿರುವ ಜನ. ಕುಟುಂಬ ಸಮೇತ ಬಂದು ಗಣಪನ ಮೂರ್ತಿಗಳ ಖರೀದಿ ಮಾಡಿದ್ದಾರೆ. ಜಿಲ್ಲಾಡಳಿತ ಒತ್ತಡದಿಂದ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳತ್ತ ಜನರ ಒಲವು ಹೆಚ್ಚಾಗಿತ್ತು.
ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದ ಪರಿಸರ ಸ್ನೇಹಿ ಗಣಪ ಜನರನ್ನು ಕೈ ಬಿಸಿ ಕರೆಯುವಂತಿತ್ತು.
Tags:
ಶಿವಮೊಗ್ಗ ಸುದ್ದಿ