ವಿಜಯ ಸಂಘರ್ಷ
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾನ ಹಾಗೂ ಪೂಜೆ ಹಾಗೂ ವರ್ಗಾವಣೆಗೊಂಡ ಶಾಲೆಯ ಮುಖ್ಯ ಗುರುಗಳ ನಿಮ್ಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಗಿಂತ ಮತ್ತು ಗ್ರಾಮಸ್ಥರು ಹಾಗು ಗುರುವೃಂದದವತಿಯಿಂದ ಮುಖ್ಯ ಗುರುಗಳ ಉಪಸ್ಥಿತಿಯಲ್ಲಿ ಶಾಲೆಯಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡುವ ಅಭಿಲಾಷೆ ಹೊಂದಲಾಗಿದ್ದು,ಇಂದು ಅವರ ಆಸೆಯಂತೆ ಸರಸ್ವತಿ ಮೂರ್ತಿ ಪ್ರತಿಷ್ಠಾನ ಮಾಡ ಲಾಯಿತು.
ಮೂರ್ತಿ ನಿರ್ಮಾಣಕ್ಕೆ ಗ್ರಾಮಸ್ಥರು ದೇಣಿಗೆ ಹಾಗೂ ಶಾಲೆ ಅನುದಾನದಲ್ಲಿ 6 ಅಡಿ ಎತ್ತರ 4 ಅಡಿ ಅಳತೆಯ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.ಜೊತೆಯಲ್ಲಿ ವರ್ಗಾವಣೆಗೊಂಡ ಕೊಟ್ರೇಶ್. ಬಿ. ಕೊಳುರ, ಶಾಲೆ ಮುಖ್ಯಗುರುಗಳು, ರಾಜ್ಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷರು, ಇವರಿಗೆ ಗುರುವೃಂದದವತಿ ಯಿಂದ ಸನ್ಮಾನಿಸಲಾಯಿತು.
ಹುಣಸಗಿ ತಾಲ್ಲೂಕಿನ ಶಾಲೆಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಕಾರ್ಯನಿರತ ಪತ್ರಕರ್ತರ ಧ್ವನಿಯ ಹುಣಸಗಿ ತಾಲ್ಲೂಕಿನ ಅಧ್ಯಕ್ಷ ಡಾ.ಶಿವು ರಾಠೋಡ ರವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ನಾರಾಯಣಾಪುರ ಪ್ರೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ್ ರಾಠೋಡ ಮಕ್ಕಳೊಂದಿಗೆ ಬೆರೆತು ಮಕ್ಕಳಿಗೆ ಕಾನೂನು ಅರಿವು ಮೂಡಿಸಿದರು. ಬಾಲ್ಯವಿವಾಹ. ಲೈಂಗಿಕ ದೌರ್ಜನ್ಯದ ಕುರಿತ ಮಾಹಿತಿ ನೀಡಿ, ವಿದ್ಯಾರ್ಥಿಗಳು ಓದಿನ ಆಸಕ್ತಿ ಹೊಂದಿ ಉತ್ತಮ ಸಾಧಕರಾಗಬೇಕು. ತಂದೆ ತಾಯಿಯ ಗೌರವ ನಿಮ್ಮ ಜವಾಬ್ದಾರಿ ಇದೆ ಎಂದು ಅರಿವು ಮೂಡಿಸಿದರು.
ಇದೆ ಸಂದರ್ಭದಲ್ಲಿ ಓಂ ಪ್ರಕಾಶ ಪತ್ತಾರ್ ಪ್ರಧಾನ ಗುರುಗಳು ಮಾರನಾಳ , ಬಸಲಿಂಗಪ್ಪ ಹಿರೇಮಠ , ಪವಿತ್ರ.ಎಸ್, ರುದ್ರಮ್ಮ, ಭಾವನೇಶ್ವರಿ, ರೇಷ್ಮಾ ಖಾಜಿ, ತಿರುಪತಿ ರಾಠೋಡ್, ಮಹಾದೇವ ರಾಠೋಡ್, ಆನಂದ ಕೆರೆಹೋಲ ಮತ್ತು ಶಾಲೆಯ ಉಸ್ತುವಾರಿ ಹಾಗೂ ಮೇಲುಸ್ತುವಾರಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
( ✍️ಶಿವು ರಾಠೋಡ್ ಯಾದಗಿರಿ )
Tags:
ಯಾದಗಿರಿ ನಹುಣಸಗಿ ನ್ಯೂಸ್