ವಿಜಯ ಸಂಘರ್ಷ
ಕೆ.ಆರ್.ಪೇಟೆ: ಯುವಕರು ಸಂಘಟಿತರಾಗಿ ಶಾಂತಿ ಸೌಹಾರ್ದತೆ ಯಿಂದ ಶ್ರೀ ಗೌರಿ ಗಣೇಶನ ಪ್ರತಿಷ್ಠಾಪಿಸಿ, ಕಾನೂನು ಉಲ್ಲಂಘಿಸದೆ ಭಗವಂತನನ್ನು ವಿಸರ್ಜಿಸಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಯುವಕರಿಗೆ ಮನವಿ ಮಾಡಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ತಾಲೂಕಿನ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಯುವಕರಿಗೆ ಶ್ರೀ ಗೌರಿ ಗಣೇಶ ಪ್ರತಿಷ್ಠಾಪಿಸಲು ಧನ ಸಹಾಯ ನೀಡಿ ಮಾತನಾಡಿದರು.
ಶ್ರೀ ಗೌರಿ, ಗಣೇಶ ಹಬ್ಬ ಎಂದರೆ ಜಾತಿ ಧರ್ಮವಿಲ್ಲದೆ ಯುವಕರು ಸಂಘಟಿತರಾಗಿ ಆರೋಗ್ಯವಂತ ಸಮಾಜಕ್ಕಾಗಿ ಸಡಗರ ಸಂಭ್ರಮದಿಂದ ಭಗವಂತನ ಆರಾಧಿಸುವ ಹಬ್ಬ ಹಾಗಾಗಿ ಯುವಕರು ಘರ್ಷಣೆ ಮಾಡಿಕೊಳ್ಳದೆ ಶಾಂತಿ ಸೌಹಾರ್ದತೆ ಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸಂಭ್ರಮದಿಂದ ಆಚರಿಸಬೇಕು.ಈ ಹಬ್ಬದ ಅಂಗವಾಗಿ ಪಿಓಪಿ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಿತ ಮೂರ್ತಿ ಗಳನ್ನು ಪ್ರತಿಷ್ಠಾಪಿಸದೇ ಪರಿಸರ ಸ್ನೇಹಿ ವಿಗ್ರಹಗಳನ್ನು ಸ್ಥಾಪಿಸಬೇಕು. ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶೀಳನೆರೆ ಅಜಯ್, ಲೋಕೇಶ್, ದಿಲೀಪಗೌಡ,ಅಭಿಷೇಕ್, ಸುರೇಶ್, ಮಧು, ನರಸಿಂಹ, ಗುರು, ಪ್ರಸಾದ್, ವಿನಯ್, ಯೋಗೇಶ್, ಸೇರಿದಂತೆ ನೂರಾರು ಯುವಕರು ಇದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ ಆರ್ ಪೇಟೆ ವರದಿ