ತಮ್ಮ ಅಧಿಕಾರ ಅವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಪುರಸಭಾ ನೂತನ ಅಧ್ಯಕ್ಷರ ಪಂಕಜಾ ಕೆ.ಬಿ ಪ್ರಕಾಶ್ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರ ಸಹಕಾರದಿಂದ ಉತ್ತಮ ಸ್ಥಾನಕ್ಕೆ ಈ ಸಂದರ್ಭದಲ್ಲಿ ಅಲಂಕರಿಸು ತ್ತಿದ್ದೇನೆ. ಸರ್ಕಾರದಿಂದ ಬರುವ ಸವಲತ್ತು ಯೋಜನೆಗಳನ್ನು ಅರ್ಹ ಫಲನುಭವಿಗಳಿಗೆ ತಲುಪಿಸಲು ಪ್ರಯತ್ನ ಮಾಡುತ್ತೇನೆ. ಕಚೇರಿಗೆ ಬರುವ ಸಾರ್ವಜನಿಕರ ಜತೆಯಲ್ಲಿ ಅಧಿಕಾರಿ ಗಳು ಸೌಜನ್ಯದಿಂದ ವರ್ತಿಸಿ ಕಾನೂನು ರೀತಿಯಲ್ಲಿ ಅವರುಗಳ ಕೆಲಸವನ್ನು ಕಾಲಮಿತಿಯೊಳಗೆ ಮಾಡಿಕೊಡಲು ಅಧಿಕಾರಿ ಗಳಿಗೆ ಸೂಚಿಸುತ್ತೇನೆ. ಪಕ್ಷ ಬೇಧ ಮರೆತು ನಗರದ 23 ವಾರ್ಡ್‌ಗಳ ಸದಸ್ಯರ ಸಹಕಾರ ದೊಂದಿಗೆ ಅಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸುತ್ತಾ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನನ್ನ ಅಧಿಕಾರ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಹಿರಿಯ ಸದಸ್ಯರಾದ ಡಿ.ಪ್ರೇಮ್ ಕುಮಾರ್,ಕೆ. ಬಿ ಮಹೇಶ್,ಹೊಸಹೊಳಲು ಪ್ರವೀಣ್, ಇಂದ್ರಾಣಿ ವಿಶ್ವನಾಥ್, ಮುಖ್ಯ ಅಧಿಕಾರಿ ರಾಜು, ಮುಖಂಡರಾದ ಸ್ನೇಹಿತ ರಮೇಶ್,ಉಮೇಶ್,ಹೊಸಹೊಳಲು ದೇವರಾಜು, ವಿಶ್ವನಾಥ್,ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು