ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ನಾವು ಮಾಡುವ ಸೇವೆ ಸಾರ್ಥಕ ಗೊಳ್ಳಬೇಕಾದರೆ ಅಗತ್ಯ ವಿರುವಲ್ಲಿ ಮಾತ್ರ ಸೇವೆ ಮಾಡಬೇಕು ದುರ್ಬಲರಿಗೆ ಸಹಾಯ ಹಸ್ತ ನೀಡಿ ದಾಗ ತೃಪ್ತಿ ಸಿಗುತ್ತದೆ ಎಂದು ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಹಾಗೂ ಸ್ವೇದ ಸಂಸ್ಥೆಯ ಕಾರ್ಯದರ್ಶಿ ಶಿಲ್ಪ ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ. ನಗರದ ಗಾಡಿ ಕೊಪ್ಪದ ಅಜಯ್ ಹಿರೇಮಠ ಎರಡು ಕಾಲು ಅಂಗವಿಕ ಲತೆಯಿಂದ ಬಳಲುತ್ತಿರುವ ಅವರಿಗೆ ಸುವ್ಯವಸ್ಥಿತವಾದ ವೀಲ್ ಚೇರನ್ನು. ಶಿಲ್ಪ ಗೋಪಿನಾಥ್ ವೇದ ನಾಗರಾಜ್ ಇವರ ಸಹಕಾರದಿಂದ ವೀಲ್ ಚೇರ್ ಹಾಗೂ ಅಗತ್ಯ ವಸ್ತುಗಳನ್ನು ನೀಡಿ ಅವರ ಜೀವನ ಉತ್ತಮ ವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಪೂರ್ವ ಇನ್ನರ್ವಿಲ್ ಈಗಾಗಲೇ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ ಮತ್ತು ಆರೋಗ್ಯದತ್ತ ಹೆಚ್ಚು ಗಮನ ಹರಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಔಷಧಿ ವಿತರಣೆ ಹಾಗೂ ಬಡ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ಗಳನ್ನು ವಿತರಿಸುವುದರ ಮೂಲಕ ಸಾಧಕರನ ಗುರುತಿಸಿ ಗೌರವಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಒಂದು ಮಾದರಿ ಸಂಸ್ಥೆಯಾಗಿಹೊರಹೊಮ್ಮಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಅಧ್ಯಕ್ಷ ವಾಗ್ದೇವಿ ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ನೇಹ ಪ್ರೀತಿ ಸೇವೆಗಾಗಿ ಇನ್ನರ್ವಿಲ್ ಸಂಸ್ಥೆ ಇವತ್ತು ಪ್ರಪಂಚಾದ್ಯಂತ ತನ್ನ ಸೇವೆಗಳ ಮುಖಾಂತರ ಮನುಕುಲವನ್ನು ತಲುಪಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ಬೆಂಚು ಡೆಸ್ಕ್ ಗಳನ್ನು ನೀಡಿ ಶಿಕ್ಷಣಕ್ಕೆ ಉತ್ತೇಜನ ಕೊಟ್ಟಿದ್ದೇವೆ. ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಅರಿವಿನ ಕಾರ್ಯಕ್ರಮಗಳನ್ನು ಮೂಡಿಸುತ್ತಾ ಬಂದಿದ್ದೇವೆ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದು ನುಡಿದರು.
ಇನ್ನರ್ವೀಲ್ ನ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ಕಾರ್ಯದರ್ಶಿ ಲತಾ ಸೋಮಣ್ಣ, ಜಗದೀಶ್ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು