ಶ್ರೀ ಶ್ರೀನಿವಾಸ ದೇವಸ್ಥಾನ ದಲ್ಲಿ ಅ.12 ರಂದು ರಥೋತ್ಸವ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಬೈಪಾಸ್ ರಸ್ತೆ, ಮಿಲ್ಟಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.12 ರಂದು ಸ್ವಾಮಿಯ ರಥೋತ್ಸವ ನಡೆಯಲಿದೆ. 

ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮನ್ನಾರಾಯಣನ ದಶಾವತಾರ ಕಿರು ಪರಿಚಯ ಮಾಡುವ ನಿಟ್ಟಿನಲ್ಲಿ ಶ್ರೀನಿವಾಸ ಸ್ವಾಮಿಗೆ ಪ್ರತಿದಿನ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಭಕ್ತರ ಗಮನ ಸೆಳೆಯಲಾಗುತ್ತಿದೆ.

ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವ ಲಯಕರ್ತ ತ್ರಿಮೂರ್ತಿಗಳಲ್ಲಿ ಸ್ಥಿತಿಸ್ಥಾಪಕ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಧರೆಯಲ್ಲಿ ಹತ್ತು ಅವತಾರ ಗಳನ್ನೆತ್ತಿಹನು. ಲೋಕ ಕಲ್ಯಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲಾ ಅವತಾರಗಳ ಹಾಗು ಈ ಅವತಾರಗಳಿಗೆ ಕಾರಣವಾದ ಜಯ ವಿಜಯದ ಶಾಪ ವೃತ್ತಾಂತದ ಕಿರುಪರಿಚಯ ಮಾಡಲಾಗುತ್ತಿದೆ.

ಮೊದಲ ದಿನ ಮತ್ಸಾವತಾರ :

ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗು ಪ್ರಳಯದ ನಂತರ ಮಹಾನ್ವೇದಗಳನ್ನು ಋಷಿ ಮುನಿಗಳಿಗೆ ಪುನಃ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸಾವತಾರ. ಮೊದಲ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು.

ಎರಡನೇ ದಿನ ಕೂರ್ಮಾವತಾರ :

ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದು ಲೋಕ ಕಲ್ಯಾಣಾರ್ಥ ವಾಗಿಯೇ. ಕಲ್ಪವೃಕ್ಷ ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನು ಪಡೆಯಲು ಮಂದಾರ ಪರ್ವತವನ್ನು ಕಡಗೋಲು ಮಾಡಿ ವಾಸುಕಿ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದಾರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರೆಡನೇ ಅವತಾರವೇ ಕೂರ್ಮಾವತಾರ, ಎರಡನೇ ಈ ಅಲಂಕಾರ ಕೈಗೊಳ್ಳಲಾಗಿತ್ತು.

ಮೂರನೇ ದಿನ ವರಾಹಾವತಾರ:

ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ, ಬಲ, ವರಬಲ, ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗು ದುಷ್ಟನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರವೇ ವರಹಾವಾತಾರ, ಮೂರನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು.

ನಾಲ್ಕನೇ ದಿನ ನರಸಿಂಹಾವತಾರ:

ಹಿರಣ್ಯಾಕ್ಷನ ಸೋದರನಾದ ಹಿರಣ್ಯ ಕಶಿಪು ವರಬಲದಿಂದ, ಬುಜಭಲದಿಂದ ನರನನ್ನೂ, ದೇವಾನುದೇವತೆಗಳನ್ನು ಕಾಡಿ, ಮಹಾ ಗರ್ವಿಷ್ಟನಾಗಿ ಧರ್ಮವನ್ನು ಮರೆತು ದುರಾಚಾರಿಯಾದಾಗ, ಆತನ ಮಗ ಪರಮ ವಿಷ್ಣು ಭಕ್ತನಾದ ಬಾಲ ಪ್ರಹ್ಲಾದನ ಭಕ್ತಿಯ ಕೋರಿಕೆಗೆ ಕಂಬದಿಂದ ಅವತರಿಸಿ ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವತಾರವೇ ನರಸಿಂಹಾವತಾರ. ೪ನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು.

ಐದನೇ ದಿನ ನಾಮಾನಾವತಾರ :

ಇಂದ್ರ ಪದವಿಯ ಮೇಲೆ ಕಣ್ಣಿಟ್ಟಿದ್ದ ದಾನ ವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು ಒಂದು ಅಡಿಯಲ್ಲಿ ಭೂಮಿಯನ್ನು, ಮತ್ತೊಂದು ಅಡಿಯಲ್ಲಿ ಆಕಾಶವನ್ನು ಅಳೆದ ವಾಮನ ಮೂರನೇ ಅಡಿಯನ್ನು ಬಳಿಕ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರವೇ ವಾಮಾನಾವತಾರ. ಐದನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು.

ಅರನೇ ದಿನ ಪರಶುರಾಮವತಾರ :

ಲೋಕ ಕಂಟಕರಾಗಿ ಮುಗ್ಧ ಜನರ ಮೇಲೆ ದಾಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶ ಮಾಡಲು ವಿಷ್ಣು ಎತ್ತಿದ ಅವತಾರವೇ ಪರಶುರಾಮವತಾರ. ಈ ಅವತಾರದಲ್ಲಿ ಪರಶುರಾಮರು ೨೧ ಬಾರಿ ಭೂ ಪ್ರದಕ್ಷಣೆ ಮಾಡಿ ದುಷ್ಕರಾದ ಎಲ್ಲ ಕ್ಷತ್ರಿಯರನ್ನು ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು. ಆರನೇ ದಿನ ಈ ಅಲಂಕಾರ

ಕೈಗೊಳ್ಳಲಾಗಿತ್ತು. ಅ.೧೨ರಂದು ಸ್ವಾಮಿಯ ರಥೋತ್ಸವ :

ಶ್ರೀ ಶ್ರೀನಿವಾಸ ದೇವರ ರಥೋತ್ಸವ ಅ.12 ರ ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಇದಕ್ಕೂ ಮೊದಲು ಕಲಾಹೋಮ ಜರುಗಲಿದೆ. ರಥೋತ್ಸವದ ನಂತರ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸು ವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು