ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕ್ರೀಡೆಯಲ್ಲಿ ಪಾಲ್ಗೊಳ್ಳು ವುದರಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ. ದಿನ ನಿತ್ಯ ಸ್ವಲ್ಪ ಸಮಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ತಾಲೂಕು ವಿಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿ ಯೇಷನ್ ಸಹಯೋಗದಲ್ಲಿ ಪ್ರಥಮ ಬಾರಿಗೆ ಐಶ್ವರ್ಯ ಲ್ಯಾಬ್ ವತಿಯಿಂದ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಎರಡು ದಿನದ ಟೆನ್ನಿಸ್ ಬಾಲ್ ಪಂದ್ಯಾವಳಿ ಐಶ್ವರ್ಯ ಕಪ್ 2024 ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಮುಂದುವರೆದಂತೆ ವಾಟ್ಸಾಪ್, ಫೇಸ್ ಬುಕ್ ಹಾಗೂ ಮೊಬೈಲ್‌ಗೆ ನಾವು ದಾಸರಾಗುತ್ತಿ ದ್ದೇವೆ. ಇದರಿಂದ ನಾವು ಹೊರಬಂದು ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳ ಬೇಕು. ಇಂತಹ ಕ್ರೀಡೆಗಳಿಂದ ಪರಸ್ಪರರಲ್ಲಿ ಒಡನಾಟ ಹೆಚ್ಚುವುದ ರಿಂದ ಆತ್ಮೀಯತೆ ಜಾಸ್ತಿಯಾಗು ತ್ತದೆ ಹಾಗೂ ವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ಕ್ರೀಡಾಕೂಟಗಳಲ್ಲಿ ಎಲ್ಲರೊಂದಿಗೆ ತೊಡಗಿಸಿ ಕೊಳ್ಳುವುದರಿಂದ ಖಿನ್ನತೆ ದೂರವಾಗುವುದರ ಜೊತೆಗೆ ನಾವು ದೀರ್ಘಾಯುಷ್ಯ ಉಳ್ಳವರಾ ಗುತ್ತೇವೆ. ಬಿಸಿಲಲ್ಲಿ ಆಟವಾಡುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರದ ಜೊತೆಗೆ ಕ್ರೀಡೆಯನ್ನು ಅಗತ್ಯವಾಗಿ ಮೈಗೂಡಿಸಿಕೊಳ್ಳ ಬೇಕು ಎಂದರು.
ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಎಂಟು ತಂಡಗಳು ಭಾಗವಹಿಸಿ ವಿಶೇಷ ಆಟದ ಪ್ರದರ್ಶನ ನೀಡಿ ಪರಸ್ಪರರಲ್ಲಿ ಸಂತೋಷ ಹಂಚಿ ಕೊಂಡರು.
ಐಶ್ವರ್ಯ ಲ್ಯಾಬ್‌ನ ಜಗದೀಶ್ ಮಾತನಾಡಿ, ವೃತ್ತಿಯ ಜೊತೆಗೆ ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಸದಾ ನಮಗೆ ಉತ್ಸಾಹವನ್ನು ನೀಡುವುದರ ಜೊತೆಗೆ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳು ಸಹ ಗಟ್ಟಿಯಾಗುತ್ತದೆ. ಉತ್ತಮವಾಗಿ ರಕ್ತ ಸಂಚಾರವಾಗುವುದರಿಂದ ಯಾವುದೇ ಕಾಯಿಲೆಗಳಿಗೆ ಆಸ್ಪದವಿರುವುದಿಲ್ಲ. ನಮ್ಮ ಅಸೋಸಿಯೇಷನ್ ನಲ್ಲಿ ರಾಜ್ಯಮಟ್ಟ, ಜಿಲ್ಲಾ ಮಟ್ಟದ ಆಟಗಾರರು ಸಹ ಇರುವುದು ನಮಗೆ ಹೆಮ್ಮೆಯ ಸಂಗತಿ. ರಾಜ್ಯಮಟ್ಟವನ್ನ ಪ್ರತಿನಿಧಿಸಿ ಪ್ರಶಸ್ತಿಯನ್ನು ತೆಗೆದು ಕೊಂಡು ಬಂದಿರುವುದು ಸಂತೋಷ ಮೂಡಿದೆ ಎಂದರು.
ತಾಲೂಕು ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸತೀಶ್, ಪ್ರಕಾಶ್, ವಿಜಯಕುಮಾರ್ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ