ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸ್ವಚ್ಛತಾ ಹಿ ಸೇವಾ-2024' ಅಂಗವಾಗಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರಕ್ಕೆ ಜಿಲ್ಲಾ ಪರಿಸರ ಅಧಿಕಾರಿ ವಿ.ರಮೇಶ್, ಉಪ ಪರಿಸರ ಅಧಿಕಾರಿ ಶಿಲ್ಪಾ.ಕೆ ಇವರುಗಳು ಅಭಿಯಾನದ ಅಂಗವಾಗಿ ವಿಐಎಸ್ಎಲ್ ಅತಿಥಿ ಗೃಹದ ಆವರಣದಲ್ಲಿ ನಿರ್ವಿುಸಿರುವ ಸರ್ ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಭೇಟಿ ನೀಡಿದರು.
ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಲ್. ಚಾಂದ್ವಾನಿ, ಉನ್ನತ ಅಧಿಕಾರಿಗಳಾದ ಟಿ. ರವಿಚಂದ್ರನ್, ಎಲ್. ಪ್ರವೀಣ್ ಕುಮಾರ್, ಎಂ. ಸುಬ್ಬರಾವ್, ವಿಕಾಸ್ ಬಾಸ್ಕರ್ ಮತ್ತಿತರರು ಭಾಗವಹಿಸಿದ್ದರು.
ಸೆಪ್ಟಂಬರ್-ಅಕ್ಟೋಬರ್, 2024 ರ ಅವಧಿ ಯಲ್ಲಿ ಸಾವಿರ ಸಸಿಗಳನ್ನು ವಿತರಿಸಲು SAIL-VISL ವಾಗ್ದಾನ ಮಾಡಿದ್ದು, ಈ ಅಭಿಯಾನದ ಭಾಗವಾಗಿ ಹೊಂಗೆ, ಅಶೋಕ, ಹಲಸು, ಅಡಿಕೆ ಮತ್ತು ತುಳಸಿ ತಳಿಯ 700 ಸಸಿಗಳನ್ನು ನೌಕರರಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ವಿತರಿಸಲಾಯಿತು.
Tags
ಭದ್ರಾವತಿ VISL ನ್ಯೂಸ್