ಸಾಲಬಾಧೆ ರೈತ ಆತ್ಮಹತ್ಯೆ

ವಿಜಯ ಸಂಘರ್ಷ ನ್ಯೂಸ್ 
ತೀರ್ಥಹಳ್ಳಿ: ಸಂಘ ಸಂಸ್ಥೆಗಳು ಹಾಗೂ ಇತರೆಡೆ ಸಾಲ ಅಲ್ಲದೆ ಬೆಳೆಯಲ್ಲೂ ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ರೈತನೋರ್ವ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ತಾಲೂಕಿನ ಸುಣ್ಣದ ಮನೆಯ ನೇಮನಾಯ್ಕ (60) ಮೃಪಟ್ಟವರು. ಮೃತ ರೈತ ಅಡಿಕೆಗೆ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದ ಬೇಸತ್ತು ಜೀವನ ನಿರ್ವಹಣೆಗಾಗಿ ಸಂಘ ಸಂಸ್ಥೆಯಲ್ಲಿ ಸಾಲ ತೀರಿಸಲು ದಿಕ್ಕು ತೋಚದೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ.

ನೇಮನಾಯ್ಕ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡ ಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು