ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ನಾಮಫಲಕದಲ್ಲಿ ತಪ್ಪು ಪದಗಳಿಂದ ನಮೂದಿಸಿದ್ದನ್ನು ಖಂಡಿಸಿ ಕೆಆರ್‌ಎಸ್ ಪಕ್ಷದ ಮುಖಂಡ ತೀರ್ಥ ನೇತೃತ್ವದಲ್ಲಿ ಸರಿಪಡಿಸಲು ಆಗ್ರಹಿಸಿ ಸಂಬಂಧಿತ ನಿಲ್ದಾಣದ ಅಧಿಕಾರಿಗಳನ್ನು ಒತ್ತಾಯಿಸಿದ ಮೇರೆಗೆ ಸರಿಪಡಿಸಲಾಗಿದೆ.
ಹಲವಾರು ದಿನಗಳಿಂದ ನಿಲ್ದಾಣದಲ್ಲಿ
"ತಣ್ಣೀನೀರು" ಎಂಬ ನಾಮಫಲಕ ಹಾಕಲಾಗಿತ್ತು. ಕ್ಷೇತ್ರದ ಕನ್ನಡ ಅಭಿಮಾನಿ ಗಳು ಪಕ್ಷಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ಒಗ್ಗೂಡಿ ರೈಲ್ವೆ ನಿಲ್ದಾಣ ವ್ಯವಸ್ಥಾಪಕರಿಗೆ ಒತ್ತಾಯಿಸಲಾಗಿತ್ತು.
ಅನೇಕ ಭಾರಿ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು ಸಹ ಕ್ರಮ ಕೈಗೊಳ್ಳದ ಕಾರಣ ಶನಿವಾರ ಕೆಆರ್ ಎಸ್ ಪಕ್ಷದ ಮುಖಂಡರು ನಾಮಫಲಕ ತೆರವು ಗೊಳಿಸಿ ಸರಿಪಡಿಸಲು ಮುಂದಾಗು ವಂತೆ ಆಗ್ರಹಿಸಿದ ಮೇರೆಗೆ ರೈಲು ನಿಲ್ದಾಣದಲ್ಲಿ "ತಂಪಾದ ನೀರು" ಎಂದು ಫಲಕ ಹಾಕಲಾಗಿದೆ. ಇದರಿಂದ ಸಂತಸಗೊಂಡ ಮುಖಂಡರು ನಿಲ್ದಾಣದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.