ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಜನ್ನಾಪುರದ ಬಸವೇಶ್ವರ ಅನುದಾನಿತ ಕನ್ನಡ ಪ್ರೌಢಶಾಲೆಯ ಬಾಲಕರು ಆನವಟ್ಟಿಯಲ್ಲಿ ನಡೆದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಂಗಳೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಭಾಗಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕರ ತಂಡಕ್ಕೆ ಶಿವಮೊಗ್ಗ ಡಿಡಿಪಿಐ ಎಸ್.ಆರ್ ಮಂಜುನಾಥ್, ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ, ಟಿಪಿಒ ಬಿ.ಹೆಚ್.ಪ್ರಭು, ಸಂಸ್ಥೆಯ ಆಡಳಿತ ಮಂಡಳಿ,ಶಿಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.