ಶಿಕ್ಷಕ ಸಾಹಿತಿ ರಂಗನಾಥ ಕ ನಾ ದೇವರ ಹಳ್ಳಿ ಇವರಿಗೆ ವಿಶೇಷ ಸಾಧನೆಗೆ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಚನ್ನಗಿರಿ: ದೇವರಹಳ್ಳಿ ಇಲ್ಲಿನ ತಾಲೂಕು ಭಗೀರಥ ಉಪ್ಪಾರ ನೌಕರರ ಸಂಘದ ವತಿಯಿಂದ ರಂಗನಾಥ ಕ ನಾ ಶಿಕ್ಷಕರು ದೇವರಹಳ್ಳಿ ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿ ಸಲಾಯಿತು. 

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು. ಇವರು ಜಿ. ಕೆ. ನಾಗರಾಜಪ್ಪ ಮತ್ತು ರತ್ನಮ್ಮ ಇವರ ಮಗನಾಗಿ ದಿನಾಂಕ 01/04/1983 ರಲ್ಲಿ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಜನಿಸಿರುತ್ತಾರೆ. ಇವರು ಒಂದನೇ ತರಗತಿಯಿಂದ ಕಾಲೇಜು ಶಿಕ್ಷಣದವರೆಗೆ ದೇವರಹಳ್ಳಿಯಲ್ಲಿ ಓದಿದ್ದು, ವೃತ್ತಿಪರ ಶಿಕ್ಷಣವನ್ನು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ದಲ್ಲಿ ಪೂರೈಸಿರುತ್ತಾರೆ. ಉನ್ನತ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ವಿಭಾಗದಲ್ಲಿ ಪಡೆದಿರುತ್ತಾರೆ. ಇವರು ೦7/03/2005 ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿ ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿ, ಅಲ್ಲಿ ಜೇನುಕುರುಬ, ಸೋಲಿಗ ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆದಿರುತ್ತಾರೆ. 

ಸತತ 10 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಗ್ರಾಮದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತೀವರ್ಷ ಗ್ರಾಮದ ಹಬ್ಬದಂತೆ ಆಚರಿಸಿ ಜನಮೆಚ್ಚುಗೆ ಪಡೆದಿರುತ್ತಾರೆ. ಇವರ ಕರ್ತವ್ಯವನ್ನು ಮೆಚ್ಚುದ ಶಿಕ್ಷಣ ಇಲಾಖೆ ಇವರಿಗೆ “ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ “ ನೀಡಿ ಗೌರವಿಸಿದೆ. ಅದೇ ವರ್ಷ ರೋಟರಿ ಕ್ಲಬ್ ಮೈಸೂರು “ಜಿಲ್ಲಾ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ “ ನೀಡಿದೆ. 

ನಂತರ ತೀರ್ಥಹಳ್ಳಿ ಹಾಗೂ ಪ್ರಸ್ತುತ ಭದ್ರಾವತಿ ತಾಲೂಕಿನ ವಿಶ್ವನಗರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಇವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ನೀಡಿದ ನಾವಿನ್ಯ ಶಿಕ್ಷಣ ಹಾಗೂ ಶಾಲೆಯಲ್ಲಿನ ಕ್ರಿಯಾತ್ಮಕ ಚಟುವಟಿಕೆ ಗಳನ್ನು ಮತ್ತು ಮಕ್ಕಳ ಪ್ರಗತಿಯನ್ನು ಗಮನಿಸಿದ ಶಿಕ್ಷಣ ಇಲಾಖೆ ಇವರಿಗೆ 2023ರಲ್ಲಿ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ “ ನೀಡಿ ಗೌರವಿಸಿದೆ. 

ತಮ್ಮನ್ನು ತಾವು ಸಾಹಿತ್ಯ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಯಾಗಿದ್ದು ಇವರ ದೊಡ್ಡಪ್ಪನವರಾದ ಹೆಚ್ ನೀಲಪ್ಪನವರಿಂದ ಸ್ಪೂರ್ತಿ ಪಡೆದ ಇವರು ಈಗಾಗಲೇ “ಆಸೆಯ ಕಂಗಳು “, “ಮಿಥ್ಯಾವತಾರ”, “ಕರಿಮುಗಿಲ ಗಿರಿಕಾವ್ಯ”, “ದೇವರ ತುಂಟಾಟ “, “ಕನ್ನಡಿಯೊಳಗಣ ನಂಟು”, ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇವರು ಮಕ್ಕಳಿಗೂ ಸಾಹಿತ್ಯಾಭಿರುಚಿ ಬೆಳೆಸಿ, ಅನೇಕ ಬಾಲಕವಿಗಳನ್ನು ಸೃಷ್ಟಿಸಿರುವುದು ಅಭಿನಂದನಾರ್ಹ. ಇವರ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪತ್ರಿಕಾ ಮಾಧ್ಯಮದವರು, “ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ” ನೀಡಿದ್ದಾರೆ. ಇವರು “ಮಯೂರ ವರ್ಮ ರಾಜ್ಯ ಪ್ರಶಸ್ತಿ “, ಶ್ರೀ ಕೇದಾರೇಶ್ವರ ಪ್ರಶಸ್ತಿ “, “ ಕನ್ನಡ ಗಾರುಡಿಗ ರಾಜ್ಯ ಪ್ರಶಸ್ತಿ “, ಹಾಗೂ ವಿವಿಧ ಸಂಘಗಳಿಂದ ಸಾದಕರತ್ನ ಪ್ರಶಸ್ತಿ ಪಡೆದಿರುತ್ತಾರೆ. ಹಾಗೂ ಇವರು ನಮ್ಮ ಸಮಾಜದ ಹೆಮ್ಮೆಯಾಗಿ ಗುರುತಿಸಿ ಕೊಂಡಿದ್ದು, ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯ ತರಬೇತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಇಲಾಖೆಗೂ ಹೆಮ್ಮೆ ತಂದಿರುತ್ತಾರೆ. 

ಪೂಜ್ಯ ಶ್ರೀ ಪುರುಷೋತ್ತಮಾನಂದ ಸ್ವಾಮಿ ಗಳ ಕೃಪೆಗೆ ಪಾತ್ರರಾಗಲಿ, ಹಾಗೂ ಇವರ ಭವಿಷ್ಯ ಉಜ್ವಲವಾಗಿ ಇನ್ನೂ ಹೆಚ್ಚಿನ ಸೇವೆ ನಾಡಿಗೆ ಸಿಗುವಂತಾಗಲಿ ಎಂದು ಹರಸುತ್ತಾ ಚನ್ನಗಿರಿ ತಾಲೂಕು ಭಗೀರಥ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅಭಿನಂದಿಸುತ್ತಿದ್ದೇವೆ. ಎಂದು ಪೂಜ್ಯ ಶ್ರೀ ಪುರುಷೋತ್ತ ಮಾನಂದಪುರಿ ಸ್ವಾಮೀಜಿ ಆಶೀರ್ವದಿಸಿ ಸನ್ಮಾನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು