ವಿಜಯ ಸಂಘರ್ಷ ನ್ಯೂಸ್
ಯಾದಗಿರಿ: ಸುರಪುರ ನಗರದ ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಗಳ ವಿವಿಧ ಯೋಜನೆಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಶಾಸಕ ರಾಜಾ ವೇಣುಗೋಪಾಲ್ ನಾಯಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೊದಲನೇ ಆದ್ಯತೆ ನೀಡಿ, ಹೆಚ್ಚಿನ ಕೆಲಸ ಮಾಡಿ ಅರ್ಹರಿಗೆ ಮನೆ ಹಂಚಿಕೆ ಮಾಡಿ, ವೈಯಕ್ತಿಕ ಶೌಚಾಲಯ ಒದಗಿಸಿ. ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಎಲ್ಲಾ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಿರಬೇಕು, ಜೊತೆಗೆ ಕ್ಷೇತ್ರದ ಎಲ್ಲಾ ವಾರ್ಡ್ ವಾರು ಭೇಟಿ ನೀಡಿ ಸಾರ್ವಜನಿಕ ರಿಂದ ಮಾಹಿತಿ ಪಡೆದು ಕೊಳ್ಳಬೇಕು, ಎಲ್ಲಾ ಅಧಿಕಾರಿಗಳು ಫೋನ್ ಆನ್ ಇಡುವಂತ ಸೂಚಿಸಿದರು.
ಗ್ರಾಮಗಳಲ್ಲಿ ಯಾವುದೇ ಸಮಸ್ಸೆ ಇದ್ದಲಿ ತಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(✍️ವರದಿ: ಶಿವುರಾಠೋಡ್ ಯಾದಗಿರಿ)
Tags:
ಯಾದಗಿರಿ ಸುರಪುರ ನ್ಯೂಸ್