ಭೌತಿಕ ಸಂಪತ್ತು ಜೀವನ ಶಾಶ್ವತವಲ್ಲ: ಸತ್ಯ ಧರ್ಮ ಒಂದೇ ಸ್ಥಿರ- ಶ್ರೀ ರಂಭಾಪುರಿ ಜಗದ್ಗುರುಗಳು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಭೌತಿಕ ಸಂಪತ್ತು ಜೀವನ ಶಾಶ್ವತವಲ್ಲ. ಆದರೆ ಸತ್ಯ ಧರ್ಮ ಒಂದೇ ಸ್ಥಿರವೆಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಗಳು ಅಭಿಪ್ರಾಯಪಟ್ಟರು. 

ಅವರು ಬುಧವಾರ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿ ಗಳವರ 57 ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅರಳಿದ ಪುಷ್ಪಗಳು ಬೀರುವ ಸುಗಂಧ ಗಾಳಿಯಲ್ಲಿ ಹರಡುವಂತೆ ಸತ್ಕಾರ್ಯ ಗಳಿಂದ ಮನುಷ್ಯನ ಕೀರ್ತಿ ಎಲ್ಲೆಡೆ ಹರಡುತ್ತದೆ. ಮನುಷ್ಯ ಆಶೆ ಕಳೆದು ಕೊಂಡು ಬದುಕ ಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಧರ್ಮ ಸತ್ಯದ ದಾರಿಯಲ್ಲಿ ನಡೆಯು ವವನಿಗೆ ನೂರೆಂಟು ಕಷ್ಟಗಳು ಬಂದರೂ ಕೊನೆಗೆ ಸತ್ಯ ಧರ್ಮಗಳ ಪರಿಪಾಲನೆ ನಮ್ಮನ್ನು ಕಾಪಾಡುತ್ತದೆ. ದೇವರ ಹೆಸರಿನಲ್ಲಿ ಉಪವಾಸ ಮಾಡುವುದು ದೊಡ್ಡ ಸಾಧನೆಯಲ್ಲ. ಜನ್ಮ ಕೊಟ್ಟ ತಂದೆ ತಾಯಿ ಮಾರ್ಗ ದರ್ಶನ ನೀಡುವ ಗುರುವಿನಲ್ಲಿ ಶ್ರದ್ಧೆಯಿಟ್ಟು ಕಾಪಾಡುವುದೇ ದೊಡ್ಡ ಸಾಧನೆ ಎಂಬುದನ್ನು ಮರೆಯ ಬಾರದು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯರ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿ ನಡೆದರೆ ಜೀವನ ಸಾರ್ಥಕ.

 ಲಿಂ.ರಾಚೋಟಿ ಶಿವಾಚಾರ್ಯರು ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಸತ್ಕಾರ್ಯಗಳನ್ನು ಮಾಡಿ ಭಕ್ತ ಸಮುದಾಯವನ್ನು ಸನ್ಮಾರ್ಗಕ್ಕೆ ತಂದ ಕೀರ್ತಿ ಅವರ ದಾಗಿದೆ. ಇಂದಿನ ರಾಚೋಟೇಶ್ವರ ಶಿವಾಚಾರ್ಯರು ಪೂರ್ವದ ಆದರ್ಶ ಪರಿಪಾಲನೆಯನ್ನು ಪರಿಪಾಲಿಸುವ ಭಕ್ತ ಸಂಕುಲದಲ್ಲಿ ಸಂಸ್ಕಾರ ಸದ್ವಿಚಾರ ಗಳನ್ನು ಬೆಳೆಸುತ್ತಿರುವುದು ತಮಗೆ ಸಂತೋಷ ತಂದಿದೆ ಎಂದು ಹರುಷ ವ್ಯಕ್ತಪಡಿಸಿ ರೇಶ್ಮೆ ಮಡಿ ಫಲ ಪುಷ್ಪ ದೊಂದಿಗೆ ಶುಭ ಹಾರೈಸಿದರು. 

ಅಖಿಲ ಭಾರತ ವೀರಶೈವ ಮಹಾಸಭೆ ಯವರು ತಪ್ಪು ನಿರ್ಣಯ ಕೈಕೊಳ್ಳ ಬೇಡಿ ಇತ್ತೀಚೆಗೆ ಜಾತಿ ಜನಗಣತಿ ಹಿನ್ನೆಲೆಯಲ್ಲಿ ಸೇರಿದ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದು ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ಹಲವರು ಠರಾವುಗಳನ್ನು ಮಹಾಸಭೆ ಪ್ರಕಟ ಪಡಿಸಿದ್ದು ಮೊದಲನೆಯ ಠರಾವಿನಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾ
ಚಾ ರ್ಯರ ತತ್ವ ಸಿದ್ಧಾಂತ ಮತ್ತು ಶ್ರೀ ಬಸವಾದಿ ಶಿವಶರಣರ ವಿಚಾರ ಧಾರೆಯಂತೆ ಮಹಾಸಭಾ ಕಾರ್ಯ ನಿರ್ವಹಿಸುತ್ತದೆ ಎಂದಾಗಬೇಕಿತ್ತು. ಆದರೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಹೆಸರು ಕೈ ಬಿಟ್ಟಿರುವುದು ಒಳ್ಳೆಯದಲ್ಲ. ಮಹಾಸಭಾ ಯಾವಾಗಲೂ ಗುರು ವಿರಕ್ತ ಸಮುದಾಯ ವನ್ನು ಸಮಾನ ದೃಷ್ಟಿಯಿಂದ ಕಾಣಬೇಕೆಂದು ನಿಯಮ ಇರುವಾಗಲೂ ಈ ರೀತಿ ನಿರ್ಣಯ ಕೈಗೊಂಡಿರುವುದು ನೋವಿನ ಸಂಗತಿ. ಈ ವಿಚಾರವನ್ನು ಮಹಾಸಭಾ ಗಂಭೀರವಾಗಿ ಅವಲೋಕನ ಮಾಡಿ ಸರಿಪಡಿಸುವತ್ತ ಗಮನ ಕೊಡಬೇಕಾದ ಅಗತ್ಯವಿದೆ. ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿರುವ ನಿರ್ಣಯ ದಂತೆ ವೀರಶೈವ ಮಹಾಸಭೆ ನಡೆದು ಕೊಳ್ಳ ಬೇಕಲ್ಲದೇ ತಪ್ಪು ನಿರ್ಣಯ ಕೈಕೊಳ್ಳಬೇಡಿ ಎಂದು ಶ್ರೀ ಗಳು ಎಚ್ಚರಿಸಿದರು. 

ಸಂಸದ ಬಿ.ವೈ.ರಾಘವೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನಸೊಂದಿದ್ದರೆ ಮಾರ್ಗವಿದೆ. ನಂಬಿಕೆಯೊoದಿದ್ದರೆ ಜೀವನವಿದೆ. ನಿಷ್ಕಲ್ಮಶವಾದ ಭಕ್ತಿಯೊಂದಿ ದ್ದರೆ ಪರಮಾತ್ಮನ ಅನುಗ್ರಹ ಆಗುವುದ ರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಚಿಂತನಗಳನ್ನು ರಾಚೋಟಿ ಶ್ರೀಗಳು ಪರಿಪಾಲಿಸಿ ಭಕ್ತರಿಗೆ ಬೋಧಿಸಿದ ಶಕ್ತಿಯನ್ನು ಮರೆಯಲಾಗದು. ಅವರ ಜೀವನದ ಸಿದ್ಧಿ ಸಾಧನೆಗಳು ನಮ್ಮೆಲ್ಲ ರಿಗೂ ದಾರಿ ದೀಪವಾಗಲೆಂದರು. 

ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಹೇಗೆ ಬದುಕಿದ ನೆಂಬುದು ಬಹಳ ಮುಖ್ಯ. ಹಣ ಇವತ್ತು ಅಥವಾ ನಾಳೆ ಗಳಿಸಬಹುದು. ಆದರೆ ಯಾವಾಗಲೂ ಜೊತೆಯಾಗಿ ನಿಲ್ಲುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು.

 ಲಿಂ.ರಾಚೋಟಿ ಶ್ರೀಗಳವರು ಎಲ್ಲ ಭಕ್ತರನ್ನು ಸಮಾನವಾಗಿ ಕಂಡು ಸತ್ಕರಿಸಿ ಒಳಿತನ್ನು ಬಯಸಿದ ಮಹಾನ್ ಚೇತನ ಶಕ್ತಿಯೆಂದು ಸ್ಮರಿಸಿದರು. 

ನಗರಸಭಾ ಸದಸ್ಯ ಬಿ.ಕೆ.ಮೋಹನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಅತ್ಯಾಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಬಹಳಷ್ಟು ಚಂಚಲಗೊoಡಿದೆ. ಧರ್ಮ ಪರಿಪಾಲನೆಯ ದಾರಿಯಲ್ಲಿ ನಡೆದಾಗ ಬದುಕಿನಲ್ಲಿ ಶಾಂತಿ ಸಂತೃಪ್ತಿ ಸಮಾಧಾನ ಪ್ರಾಪ್ತಿಗಾಗಿ ಇಂಥ ಸಮಾರಂಭಗಳ ಅವಶ್ಯಕತೆಯಿದೆ. 

ಶ್ರೀ ರಂಭಾಪುರಿ ಜಗದ್ಗುರುಗಳು ನಿತ್ಯ ಸಂಚರಿಸಿ ಜನ ಸಮುದಾಯಗಳಲ್ಲಿ ಸದಭಿಮಾನ, ಶ್ರದ್ಧೆ, ದೇಶಭಕ್ತಿ ಧರ್ಮ ಪರಿಪಾಲನೆಯ ವಿಚಾರಗಳನ್ನು ಬೋಧಿಸಿ ಉದ್ಧರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು. 

ಸಮ್ಮುಖ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಆದರ್ಶ ಮೌಲ್ಯಗಳ ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೆಳೆಯುವ ಯುವ ಜನಾಂಗದಲ್ಲಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯ ಪಾಠಗಳನ್ನು ಮಾಡುವ ಅವಶ್ಯಕತೆ ಇದೆಯೆಂದರು.

ರಟ್ಟೀಹಳ್ಳಿ, ಕೆ.ಬಿದರೆ, ಮಳಲಿಮಠ, ತಾವರೆಕೆರೆ, ಹುಣಸಘಟ್ಟ, ಹಾರನ ಹಳ್ಳಿ, ಹಣ್ಣೆೆಮಠ. ನಂದಿಪುರ, ಮಾದಿ ಹಳ್ಳಿ, ಬೀರೂರು, ಮೆಟಕುರ್ಕೆಮಠ, ಕುರವತ್ತಿ, ನಂದಿಪುರ ಶ್ರೀಗಳವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. 

ಸಮಾರಂಭದಲ್ಲಿ ಟಿ.ವಿ.ಈಶ್ವರಯ್ಯ, ಬಿ.ಕೆ.ಜಗನ್ನಾಥ, ಎಸ್.ಎನ್. ಮಹಾಲಿಂಗ ಶಾಸ್ತ್ರಿ ಎಸ್.ಎಸ್. ಜ್ಯೋತಿಪ್ರಕಾಶ್, ಎ.ಎಂ.ಚoದ್ರಯ್ಯ, ಹೆಚ್.ಮಲ್ಲಿ ಕಾರ್ಜುನ ಸ್ವಾಮಿ, ಡಾ.ರೇಣುಕಾರಾಧ್ಯ ಶಾಸ್ತ್ರಿಗಳು, ಸಿದ್ಧಲಿಂಗಯ್ಯ, ಉಮೇಶ ಹಿರೇಮಠ ಸೇರಿದಂತೆ ಹಲವಾರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ಆಶೀರ್ವಾದ ಗುರುರಕ್ಷೆ ಸ್ವೀಕರಿಸಿದರು. 

ಇದೇ ಸಂದರ್ಭದಲ್ಲಿ ಕೋಟೆ ಮಲ್ಲೂರಿನ ಶತಾಯುಷಿ ವೇ.ಶಿವಲಿಂಗಾರಾಧ್ಯ ಶಾಸ್ತ್ರಿ ಗಳವರಿಗೆ “ಸೌಜನ್ಯ ಸುಧಾಕರ ರತ್ನ” ಎಂಬ ಪ್ರಶಸ್ತಿ ನೀಡಿ ಶುಭ ಹಾರೈಸಿದರು.

ಕೃಷ್ಣಮೂರ್ತಿ ಇವರು ಜಾನಪದ ಗೀತೆಗಳನ್ನು ಹಾಡಿದರು. ಗುರುಪ್ರಸಾದ ದೇವರು ಸ್ವಾಗತಿಸಿ, ಶಾಂತಾ ಆನಂದ ನಿರೂಪಿಸಿದರೆ. ಗಂಜಿಗಟ್ಟಿ  ಲಿಂ.ರಾಚೋಟಿ ಶ್ರೀಗಳವರ ಗದ್ದುಗೆಗೆ ಹಾಗೂ ಶ್ರೀ ಮಠದ ಎಲ್ಲ ದೈವಗಳಿಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಳಾರತಿ ನಡೆದವು. 

ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು