ವಿಜಯ ಸಂಘರ್ಷ ನ್ಯೂಸ್
( ಶಿವು ರಾಠೋಡ್ ಬೆಂಗಳೂರು)
ಬೆಂಗಳೂರು: ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸ ಲಾತಿಯ ಅವೈಜ್ಞಾನಿಕವಾಗಿ ವರ್ಗೀಕರಣ ವನ್ನ ವಿರೋಧಿಸಿ, ''ಗೋರ್ ಸೇನಾ'' ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ' ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ರವರ 155 ನೇ ಜಯಂತಿಯ ಸಂದರ್ಭದಲ್ಲಿ ಒಂದು ದಿನದ ಸತ್ಯಾಗ್ರಹ ಹಮ್ಮಿ ಕೊಳ್ಳಳಾಗಿತ್ತು.
ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ರವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು, ಅಸಂವಿಧೀನಾತ್ಮಕ ಮತ್ತು ಅವೈಜ್ಞಾನಿಕ ವಾಗಿ ವರ್ಗೀಕರಣ ಮಾಡಬಾರದಾಗಿ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಸತ್ಯಾಗ್ರಹದ ವಿಚಾರವಾಗಿ ಮನವಿಯನ್ನು ಸ್ವೀಕರಿಸಿ ಸಿಎಂ ಸಿದ್ದರಾಮಯ್ಯನವರಿಗೆ ಗಮನಕ್ಕೆ ತರುವ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದರು.
ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯದಿಂದ . ಗೋರ್ ಸೇನಾ'' ರಾಷ್ಟ್ರೀಯ ಸಂಘಟನೆ, ರಾಜ್ಯಾಧ್ಯಕ್ಷರು ಬಾಳಾಸಾಹೇಬ, ರಾಜ್ಯ ಮಾಧ್ಯಮ ವಕ್ತಾರ್ ನೆಹರು ನಾಯ್ಕ,ಚಿನ್ನಾ ರಾಠೋಡ್, ಕೃಷ್ಣ್ ನಾಯ್ಕ್ . ಹೆಚ್. ಜಾಧವ, ರಾಜ್ಯ ಕಾರ್ಯದರ್ಶಿ , ರುದ್ರ ಪುನೀತ್, ಅರುಣ್ ರಾಠೋಡ್, ಹಾಗೆ ಬೀದರ್, ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಬಿಜಾಪುರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಂದ ನೂರಾರು' ಗೋರ್ ಸೇನಾ ' ಕಾರ್ಯಕರ್ತರು ಮತ್ತು ಸ್ವಾಭಿಮಾನಿ ಗೋರ್ ಬಂಜಾರಾ ಜನಾಂಗದ ಹಿತ ಚಿಂತಕರು ಭಾಗವಹಿಸಿದ್ದರು.
Tags:
ಬೆಂಗಳೂರು ನ್ಯೂಸ್