ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಬೈಪಾಸ್ ರಸ್ತೆಯ ಎಂಪಿಎಂ ಬಡಾವಣೆಯ ಸಂಜೀವಿನಿ ವೃದ್ದಾಶ್ರಮದಲ್ಲಿ ನೊಂದ ಮನಸು ಗಳಿಗೆ ಮುದನೀಡಲು ಹಾಡುಗಳನ್ನಾಡಿ ನೃತ್ಯ ಮಾಡುವುದರ ಮೂಲಕ ನೊಂದವರ ಮನ ಸಂತೈಸಿ ಸಂತೋಷ ಗೊಳಿಸಲಾಯಿತು.
ತರೀಕೆರೆ SCI ಪ್ರಗತಿ ಸಂಸ್ಥೆಯ ನೇತೃತ್ವ ದಲ್ಲಿ ಆಶ್ರಮದ ವೃದ್ಧ ತಂದೆ ತಾಯಂದಿರ ಮನದಾಳದ ದುಃಖ ದುಮ್ಮಾನದ ಅಳಲು,ಕಣ್ಣೀರಿನ ದಾರುಣ ನೋವು ಎಂತಹವರಿಗೂ ಕಣ್ಣೀರು ತರುವಂತಿತ್ತು.
ಅಲ್ಲಿನ ನೊಂದ ಜೀವಿಗಳಿಗೆ SCI ಪ್ರಗತಿ ಸಂಸ್ಥೆಯು ಮನರಂಜಿಸುವ ಕಾರ್ಯಕ್ರಮ ಆಯೋಜಿಸಿ ಊಟ, ಹಣ್ಣು, ನೀರು ಬಾಟಲ್ಗಳನ್ನು ನೀಡಿ ಹಿರಿಯರ ಆಶೀರ್ವಾದಕ್ಕೆ ಪಾತ್ರ ರಾದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದ್ಮ, ರಾಜೇಶ್ವರಿ,ರತ್ನಮ್ಮ, SCI ಸಂಸ್ಥೆಯ ಕಾರ್ಯದರ್ಶಿ ಹಾಗೂ ವೃದ್ದಾಶ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ಆಶಾ ಮತ್ತಿತರರಿದ್ದರು.