ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಹೆಚ್ ಕೆ ಜಂಕ್ಷನ್ ಬಳಿ ಜೋಳ ತುಂಬಿದ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್‌ನಲ್ಲಿ ಬರುತ್ತಿದ್ದ ದಂಪತಿ ಸಾವು ಕಂಡಿರುವ ಘಟನೆ ನಡೆದಿದೆ.
ಮೃತರನ್ನು ತರೀಕೆರೆ ತಾಲೂಕಿನ ಬರಗೇನ ಹಳ್ಳಿ ಗೌಳಿ ಕ್ಯಾಂಪ್ ನಿವಾಸಿ ಗಳಾದ ಬಾಬು (30) ಹಾಗೂ ಅವರ ಪತ್ನಿ ಸಾವಿತ್ರಿ (27) ಎಂದು ಗುರುತಿಸಲಾಗಿದೆ.
ಜೋಳ ತುಂಬಿದ್ದ ಲಾರಿಯು ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು, ದಂಪತಿಯು ಸಹ ಹೋಟೆಲ್ ಕೆಲಸ ಮುಗಿಸಿ ತರೀಕೆರೆ ಮಾರ್ಗವಾಗಿ ಬೈಕ್ ನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಲಾರಿಯ ಹಿಂಬದಿ ಚಕ್ರಕ್ಕೆ ಬೈಕ್ ಸಿಲುಕಿ ಬಿದ್ದಿದ್ದು, ಪತಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಅಪಘಾತಕ್ಕೆ ಕಾರಣವೇನು ಎಂಬ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.