ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ: ಕೊಲೆಯೋ? ಆತ್ಮಹತ್ಯೆಯೋ?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜು ಉಪನ್ಯಾಸಕ ರೊಬ್ಬರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಭಾನುವಾರ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ.

ಮೃತರನ್ನು ಉಪನ್ಯಾಸಕ ಸುರೇಶ್‌ (58) ಎಂದು ಗುರುತಿಸಲಾಗಿದೆ.

ತೋಟದಲ್ಲಿ ಸುರೇಶ್ ಅವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಅದನ್ನು ಗಮನಿಸಿದಾಗ ಮೃತದೇಹದ ಬಳಿ ಇನ್ನೂ ಬೆಂಕಿ ಇತ್ತು ಎಂದು ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೊಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಘಟನೆ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು