ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಮನುಷ್ಯನ ದುರಾಸೆ ಯಿಂದ ಪರಿಸರ ವಿನಾಶದತ್ತ ಸಾಗುತ್ತಿದ್ದು, ನಗರೀಕರಣದಿಂದ ಗಿಡ ಮರಗಳನ್ನು ನೆಡಲು ಸ್ಥಳವೇ ಇಲ್ಲವಾಗಿದೆ. ಪರಿಸರ ಸಮತೋಲ ನಕ್ಕೆ ಗಿಡಮರಗಳು ಅತ್ಯಂತ ಅವಶ್ಯಕ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವೈದ್ಯರ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಬಗ್ಗೆ” ಮಾತನಾಡಿದರು.
ವಾಯುಮಾಲಿನ್ಯದಿಂದ ಮನುಷ್ಯರಿಗೆ ಹೊಸ ಹೊಸ ರೀತಿ ಕಾಯಿಲೆಗಳು ಬರುತ್ತಿವೆ. ಪರಿಸರ ಸಂರಕ್ಷಣೆ ಮಾಡದಿರುವ ಕಾರಣ ಹವಾಮಾನ ದಲ್ಲಿ ಬದಲಾವಣೆ ಆಗುತ್ತಿದ್ದು, ಯಾವಾಗ ಬೇಕಾದರೂ ಮಳೆ, ಬಿಸಿಲು ಎಂಬ ವಾತಾವರಣ ಸೃಷ್ಟಿಯಾಗಿದೆ. ಪ್ರಕೃತಿ ಅಸಮತೋಲನದಿಂದ ಬೆಳೆಯಲ್ಲಿ ಏರುಪೇರಾಗುತ್ತಿದೆ ಎಂದು ತಿಳಿಸಿದರು.
ಅತಿಯಾದ ರಾಸಾಯನಿಕ ಬಳಕೆ ಯಿಂದ ಪ್ರಕೃತಿ ವಿನಾಶದಂಚಿಗೆ ಸಾಗುತ್ತಿದೆ. ಹವಮಾನ ವೈಪರೀತ್ಯವು ಬಹುಮುಖ್ಯ ಕಾರಣವಾಗಿದೆ. ಮನುಷ್ಯನ ಜೀವಿತ ಅವಧಿಯು ಕುಂಠಿತವಾಗುತ್ತಿದೆ. ಈಗಲೇ ನಾವೆಲ್ಲರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ವೈದ್ಯರ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಜಿಲ್ಲೆಯ ಜನರಿಗೆ ಸಮಗ್ರ ಮಾಹಿತಿ ತಲುಪಿಸುವ ಪ್ರಯತ್ನ ಇದಾಗಿದೆ. ಆರೋಗ್ಯ, ಪರಿಸರ ಸಂರಕ್ಷಣೆ, ಹವಮಾನ ವೈಪರೀತ್ಯದ ಬಗ್ಗೆ ಜನರು ತಿಳವಳಿಕೆ ಹೊಂದಬೇಕು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಇದೆ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಂ. ಕುಮಾರಸ್ವಾಮಿ ಅವರನ್ನು ಅಭಿನಂದಿಸ ಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್. ಕೆ.ಎಸ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ಶಮಾ ಬೇಗಂ, ಜಿಲ್ಲಾ ಲೆಪ್ರಸಿ ಅಧಿಕಾರಿ ಡಾ.ಕಿರಣ್ ಎಸ್.ಕೆ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಡಾ ಸುರೇಶ್, ಡಾ. ಚಂದ್ರಶೇಖರ್, ಡಾ. ಅನಿಕೇತನ್, ಡಾ. ನವೀದ್ ಖಾನ್, ಜಿಲ್ಲಾ ಮಲೇರಿಯಾ ಕಚೇರಿ ಹಿರಿಯ ಆರೋಗ್ಯ ಸಹಾಯಕ ನಾರಾಯಣ್, ಯಜುರ್ವೇದ, ತಿಪ್ಪೆಸ್ವಾಮಿ, ಧೀರೆಂದ್ರ ಇದ್ದರು.
Tags:
ಶಿವಮೊಗ್ಗ ವರದಿ