ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ: ಮಣಿಶೇಖರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಿಸಿಯೂಟ ಕಾರ್ಯಕ್ರಮಕ್ಕೆ ಪೂರಕ ವಾಗಿ ಗುಣಮಟ್ಟದ 540 ಊಟದ ತಟ್ಟೆಗಳ ಕೊಡುಗೆ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನೀಡಲಾಯಿತು. 

ಶುಕ್ರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಣಿಶೇಖರ್ ಕಾರ್ಯಕ್ರಮವನ್ನು ದ್ದೇಶಿ ಮಾತನಾಡಿ, ವಿದ್ಯಾರ್ಥಿಗಳ ಮಧ್ಯಾಹ್ನ ಬಿಸಿಯೂಟಕ್ಕೆ ಲಯನ್ಸ್ ಕ್ಲಬ್ ನವರು ತಟ್ಟೆ ವಿತರಣಾ ಕಾರ್ಯ ಮಾದರಿ ಹಾಗೂ ಪ್ರಶಂಸನೀಯ. ಕ್ಲಬ್ ವತಿಯಿಂದ ವಿತರಿಸಿದ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿಸಿ ಕೊಳ್ಳಿ ಎಂದರಲ್ಲದೆ, ಉತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತರುವಂತಾಗ ಬೇಕು. ದೇಹದಲ್ಲಿ ಸದೃಢ ಮನಸ್ಸು ಇದ್ದರೆ ಎಲ್ಲಾ ಸಾಧನೆಗಳಿಗೂ ಪೂರಕ ವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೆರೇಪಿಸಿದರು.

ರಾಮಮೂರ್ತಿ ಹಾಗೂ ಚಂದ್ರ ಶೇಖರ್ ಇವರು ಲಯನ್ಸ್ ನ ಸೇವಾ ಮನೋಭಾವದ ಬಗ್ಗೆ ಪರಿಚಯಿಸಿ ಲಯನ್ಸ್ ದ್ಯೇಯೋದ್ದೇಶಗಳನ್ನು ತಿಳಿಸಿದರು. ಆಯೋಜಕರಾದ ಕೆ.ವಿ. ಚಂದ್ರಶೇಖರ್ ಹಾಗೂ ಪದಾಧಿಕಾರಿ ಗಳು ತಟ್ಟೆಗಳನ್ನು ವಿತರಿಸಿದರು.

ಶಾಲಾಭಿವೃದ್ಧಿ ಸಮಿತಿಯ ಪ್ರಕಾಶ್, ಅಬ್ದುಲ್ ಹಬೀಬ್, ಲಯನ್ಸ್ ನ ಅಧ್ಯಕ್ಷ ಆರ್.ರಾಮ ಮೂರ್ತಿ ನಾಯ್ದು, ಮಹೇಶ್ ಕುಮಾರ್ ಶ್ರೀನಿವಾಸ್, ಮಾಜಿ ವಲಯಾಧ್ಯಕ್ಷ ಕೆ.ವಿ. ಚಂದ್ರಶೇಖರ್, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಸೇರಿದಂತೆ ಮತ್ತಿತರರಿದ್ದರು. 

ಪ್ರಭಾರಿ ಮುಖ್ಯ ಶಿಕ್ಷಕ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ರಂಗರಾಜ್ ಸ್ವಾಗತಿಸಿದರೆ,ಮಮತಾ ನಿರೂಪಿಸಿ, ಜಾನಕಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು