ಅಂಗಾಳ ಪರಮೇಶ್ವರಿ, ಮುನೇಶ್ವರ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ. ಕುಂಭಾಭಿಷೇಕ ವಿಜೃಂಭಣೆ ಯಿಂದ ಜರುಗಿತು.

ಬೆಳಗಿನ ಜಾವ ಗಣಹೋಮ, ಆದಿವಾಸಿ ಹೋಮ, ಕಲಾ ಹೋಮ ನಡೆಯಲಿದ್ದು, ನಂತರ ಮಲ್ಲೇಶ್ವರ ಸಭಾಭವನ ಪಕ್ಕದ ಶ್ರೀ ಈಶ್ವರ ದೇವಾಲಯದಿಂದ ಗಂಗೆ ಪೂಜೆ ಯನ್ನು 101 ಗಂಗೆ ತುಂಬಿದ ಕಲಶ ಗಳನ್ನು ಹೊತ್ತು ತಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ನಂತರ ಕಲಶದ ನೀರಿನಿಂದ ಅಭಿಷೇಕ ನಡೆಸಲಾಯಿತು. 

ಅಮ್ಮನವರಿಗೂ ಹಾಗು ಮುನೇಶ್ವರ ಸ್ವಾಮಿ ಯವರಿಗೂ ಅಲಂಕಾರ ಮಾಡಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ದೊಂದಿಗೆ ದೇವಾಲಯ ಲೋಕಾರ್ಪಣೆ ಗೊಳಿಸಲಾಯಿತು. 

ಮೆರವಣಿಗೆಯಲ್ಲಿ ವಯೋವೃದ್ಧರು, ಮಹಿಳೆಯರು, ಯುವಕರು, ಯುವತಿ ಯರು, ಮಕ್ಕಳು ಕುಣಿದು ಸಂಭ್ರಮಿಸಿ ದರು. ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಅರ್ಪಣೆ:

ವಿಗ್ರಹ ಪ್ರತಿಷ್ಠಾಪನೆ ನಂತರ ಬೃಹತ್ ಹೂವಿನ ಹಾರ ವ್ಯಾದಗಳೊಂದಿಗೆ ಕ್ರೇನ್ ಮೂಲಕ ಮೆರವಣಿಗೆಯಲ್ಲಿ ತಂದು ಅಮ್ಮನವರಿಗೆ ಮತ್ತು ಮುನೇಶ್ವರ ಸ್ವಾಮಿಯವರಿಗೆ ಅರ್ಪಿಸಲಾಯಿತು.

ದೇವಸ್ಥಾನದ  ಅಧ್ಯಕ್ಷ ವಿಕಾಸ್ ರಾಜ್, ಖಜಾಂಚಿ ಮೋಹನ್ ಕುಮಾರ್, ಕಾರ್ಯದರ್ಶಿ ಆಕಾಶ್, ಸಾಗರ್, ಕೇಶವ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜನ್ನಾಪುರ, ಗಣೇಶ್ ಕಾಲೋನಿ, ಹಾಲಪ ಶೆಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು