ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಹಾಲಿನ ಉತ್ಪನ್ನ ಉಪಯೋಗದಿಂದ ಆರೋಗ್ಯ, ದೇಹ ಸದೃಢತೆಗೆ ಸಹಕಾರಿ. ಆರೋಗ್ಯ ಜಾಗೃತಿ ವಹಿಸುವುದು ಅತ್ಯಂತ ಮುಖ್ಯ ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಚೇರ್ಮನ್ ವಾಗೇಶ್ ಹೇಳಿದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್‌ನಿಂದ 200ನೇ ರೈಡ್ ಪ್ರಯುಕ್ತ ಆಯೋಜಿ ಸಿದ್ದ ನಂದಿನಿ ಡೈರಿ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಡೈರಿ ಅತ್ಯುತ್ತಮ ಉತ್ಪನ್ನ ಗಳಿಂದ ದೇಶಾದ್ಯಂತ ಮನೆ ಮಾತಾ ಗಿದೆ. ಇಲ್ಲಿನ ಸ್ವಚ್ಛತೆ, ತಯಾರಿಸುವ ರೀತಿ ತಿಳಿದುಕೊಳ್ಳು ವುದು ಸಾಮಾನ್ಯ ಜ್ಞಾನ ಹೆಚ್ಚಿಸುತ್ತದೆ ಎಂದರು.
ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಪ್ರಾರಂಭವಾಗಿ ಏಳು ವರ್ಷವಾಯಿತು. ಅಂದಿನಿಂದ ನಗರದ ನಾಗರಿಕರು ಅತ್ಯುತ್ತಮ ಸಹಕಾರ ನೀಡುತ್ತಿದ್ದು, ಇಂದು ಇನ್ನೂರನೇ ರೈಡ್ ಆಗಿದೆ. ನಗರದಲ್ಲಿ ಜರುಗುವ ಸಾಮಾಜಿಕ ಕಳಕಳಿಯ ಯಾವುದೇ ಇಲಾಖೆಯ ಕಾರ್ಯಕ್ರಮ ಇರಲಿ, ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಸಹಕಾರ ಕೋರುತ್ತಾರೆ, ಇದರಿಂದ ಸುಲಭವಾಗಿ ಜನ ಸಾಮಾನ್ಯರಿಗೆ ತಲುಪುತ್ತದೆ ಎಂದರು.
ನರಸಿಂಹ ಮೂರ್ತಿ ಮಾತನಾಡಿ, ಸೈಕಲ್ ಕ್ಲಬ್ಬಿನ ಸದಸ್ಯರು ಹಲವಾರು ಅಂತರಾಜ್ಯ ಪ್ರಸಿದ್ಧ ಸ್ಥಳಗಳಿಗೆ ಸೈಕಲ್ ನಲ್ಲಿ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಜರುಗಿದ ಒಂದೇ ಸಾಲಿನಲ್ಲಿ ಇನ್ನೂರ ಎಂಬತ್ತು ಸವಾರರು ಎರಡು ಕಿ.ಮಿ. ಕನಿಷ್ಠ ಸಮಯದಲ್ಲಿ ಪೂರೈಸಿ ವಿಶ್ವದಾಖಲೆ ಮಾಡಿದ್ದಾರೆ. ಅದರಲ್ಲಿ ನಮ್ಮ ಸೈಕಲ್ ಕ್ಲಬ್ಬಿನ ಹಲವು ಸವಾರರು ಭಾಗವಹಿಸಿ ಯಶಸ್ವಿಯಾಗಿ ದಾಖಲೆಗೆ ಭಾಜನರಾಗಿದ್ದಾರೆ ಎಂದರು.
ಹರೀಶ್ ಪಾಟಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶ್ ಕುಮಾರ್ ಸ್ವಾಗತಿಸಿ, ಮಲ್ಲಿಕಾರ್ಜುನ್ ಕಾನೂರ್ ನಿರೂಪಿಸಿದರೆ, ಗಿರೀಶ್ ಕಾಮತ್ ವಂದಿಸಿದರು. ಎನ್. ಗೋಪಿನಾಥ, ವಸಂತ ಹೋಬಳಿ ದಾರ್, ಜಿ.ವಿಜಯಕುಮಾರ್ ಮತ್ತಿತರರಿದ್ದರು.