ಅಕ್ರಮ ಸಮುದಾಯ ಭವನ ನಿರ್ಮಾಣ: ಎಫ್‌ಐಆರ್ ದಾಖಲಿಸಲು ಸ್ಥಳೀಯರ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ನಗರಸಭೆ ವ್ಯಾಪ್ತಿಯ ವಾರ್ಡ್ ನಂ.32ರ ಫಿಲ್ಟರ್‌ ಶೆಡ್ ನಾಗರಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇವರುಗಳ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫಿಲ್ಟರ್‌ಶೆಡ್ ನಾಗರಿಕರ ಹಿತ ರಕ್ಷಣ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಫಿಲ್ಟರ್‌ಶೆಡ್ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗ 25x75 ಆಳತೆ ಜಾಗವನ್ನು ಇಲ್ಲಿನ ನಾಗರಿಕರು ಜಾತ್ರೆ ಹಬ್ಬ ಹರಿದಿನಗಳಲ್ಲಿ ಉಪಯೋಗಿಸಿಕೊಳ್ಳಲು ಮೀಸಲಿ ಟ್ಟಿದ್ದು ಈ ಜಾಗದಲ್ಲಿ ಫಿಲ್ಟರ್‌ಶೆಡ್‌ಗೆ ಸಂಬಂಧವೇ ಇಲ್ಲದ ಖಾಸಗಿ ವ್ಯಕ್ತಿ ಗಳು ಅಕ್ರಮವಾಗಿ ಕೆಲವು ನಗರಸಭೆ ಅಧಿಕಾರಿಗಳ ಸಹಕಾರದಿಂದ ಲೋಕಸಭೆ, ವಿಧಾನಸಭೆ ಹಾಗು ವಿಧಾನ ಪರಿಷತ್ ಸದಸ್ಯರ, ಚುನಾಯಿತ ಪ್ರತಿನಿಧಿಗಳ ಅನು ದಾನದ ಜೊತೆಗೆ ನಾರ್ವಜನಿಕ ರಿಂದಲೂ ಸಹ ಲಕ್ಷಾಂತರ ರೂ ಹಣ ವಡೆದುಕೊಂಡು ದುರುದ್ದೇಶದಿಂದ ಆಕ್ರಮವಾಗಿ ಸಮುದಾಯ ಭವನದ ರೀತಿ ಕಟ್ಟಡವನ್ನು ನಿರ್ಮಾಣ ಮಾಡಿ ಖಾಸಗಿ ಟ್ರಸ್ಟ್ ರಚನೆ ಮಾಡಿ ಕೊಂಡಿದ್ದಾರೆ. ಸಮುದಾಯ ಭವನದ ಮುಖಾಂತರ ಬರುವ ಆದಾಯದ , ಮೂಲಗಳಾದ ಸೀರಿಯಲ್ ಸೆಟ್ ದೀಪಾಲಂಕಾರ, ಅಡುಗೆ ಪಾತ್ರೆ ಸಾಮಾನು ಗಳ ಬಾಡಿಗೆ, ಹೂವಿನ ಅಲಂಕಾರ, ಮೈಕ್ ಇತ್ಯಾದಿ ಆದಾಯದ ಮೂಲಗಳನ್ನು ಖಾಸಗಿ ಟ್ರಸ್ಟ್ ಮಾಡಿರುವವರೇ ವಹಿಸಿ ಕೊಂಡು ಹಣ ಮಾಡುವ ದಂಧೆಯನ್ನು ಮಾಡಿಕೊಂಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಆರೋಪಿಸಿದರು.

ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಈ ಆರೋಪ ಸತ್ಯ ವಾಗಿದ್ದು, ಈ ಹಿನ್ನಲೆ ಯಲ್ಲಿ 2020 ರಿಂದ ನಿರಂತರವಾಗಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿ ರುವವರ ವಿರುದ್ಧ ಟ್ರಸ್ಟ್‌ನ್ನು ವಜಾಮಾಡಿ ಕ್ರಮ ತೆಗೆದುಕೊಳ್ಳುವಂತೆ
ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿ ಕಾರಿ ಗಳಿಗೆ, ತಹಸೀಲ್ದಾ‌ರ್, ನಗರಸಭೆ ಪೌರಾಯುಕ್ತರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸ ಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿರು ವುದಿಲ್ಲ. ಈ ಹಿನ್ನಲೆಯಲ್ಲಿ ಸಮುದಾಯ ಭವನವನ್ನು ನಗರಸಭೆ ವ್ಯಾಪ್ತಿಗೊಳವಡಿಸಿಕೊಂಡು ಫಿಲ್ಟರ್‌ಶೆಡ್ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವ ನಗರಸಭೆ ಅಧಿಕಾರಿಗಳು ಹಾಗೂ ಅಕ್ರಮವಾಗಿ ಟ್ರಸ್ಟ್ ರಚಿಸಿಕೊಂಡು ಸಮುದಾಯ ಭವನವನ್ನು ನಿರ್ಮಿಸಿ ದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಂಡು ಸಮುದಾಯ ಭವನದಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ನಗರಸಭೆ ಅಧಿಕಾರಿಗಳು ಸಮುದಾಯ ಭವನಕ್ಕೆ ಬೀಗ ಹಾಕುವವರೆಗೂ ಶಾಂತಿಯುತ ವಾಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸ್ಥಳೀಯರಾದ ಬಿ.ಕೆ.ಶಶಿಕುಮಾರ್‌ ಗೌಡ, ಸಿದ್ದಮ್ಮ, ಇಂದ್ರಮ್ಮ, ಜಯಮ್ಮ, ಮಹಾಲಕ್ಷ್ಮಿ, ಮಂಜಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ, ಸಣ್ಣಮ್ಮ, ಶಾಂತಮ್ಮ, ಭರತ್‌ ಕುಮಾರ್. ಥಾಮಸ್, ಎಂ. ಶ್ರೀಧರ್, ಕುಮಾರ್, ಉಮೇಶ್, ಗೋಪಾಲ್ ರಾವ್, ಮಂಜು ಸೇರಿದಂತೆ ಅನೇಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು