ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿ ಕಾವಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗುಡುಗನಹಳ್ಳಿ ಜಿ.ಜೆ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕರಿಶೆಟ್ಟಿ ಅವರ ರಾಜೀನಾಮೆ ಯಿಂದ ತೆರವಾದ ಅಧ್ಯಕ್ಷಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗುಡುಗನಹಳ್ಳಿ ಜಿ.ಜೆ ವೆಂಕಟೇಶ್ ಹಾಗೂ ರವಿ ಎ.ಎನ್ ನಾಮಪತ್ರ ಸಲ್ಲಿಸಿದರು. ಕೊನೆ ಕ್ಷಣದಲ್ಲಿ ರವಿ ಎ.ಎನ್ ನಾಮಪತ್ರ ಹಿಂಪಡೆದ ಕಾರಣ ಕಣದಲ್ಲಿದ್ದ ಗುಡುಗನಹಳ್ಳಿ ಜಿ.ಜೆ ವೆಂಕಟೇಶ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪಶುಪಾಲನ ಸಹಾಯಕ ನಿರ್ದೇಶಕ ಡಾ:ದೇವರಾಜು ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಗ್ರಾ.ಪಂ ಸದಸ್ಯ ಕರೀಶೆಟ್ಟಿ ಯಾರಿಗೂ ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ, ಗ್ರಾ.ಪಂ.ಗೆ ಇಂದು ನೇರವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದೆ. ಗ್ರಾಮಗಳ ಸಮಗ್ರ ಅಭಿವದ್ಧಿಯ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಗುಡುಗಹಳ್ಳಿ ಜಿ.ಜೆ ವೆಂಕಟೇಶ್ ನನ್ನ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯುವ ನೀರು, ಜಾನುವಾರು ನೀರು ಕುಡಿಯುವ ತೊಟ್ಟಿ, ಜಾನುವಾರು ಕೊಟ್ಟಿಗೆ ಹಾಗೂ ಕೆರೆ-ಕಟ್ಟೆ ಅಭಿವೃದ್ಧಿ ಇದರ ಜೊತೆಗೆ ಸರ್ಕಾರ ಇಲಾಖೆಯಿಂದ ಬರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಿ, ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತ ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸರ್ಕಾರ ದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಎ.ರಾಜು, ಗುಡುಗನಹಳ್ಳಿ ಶ್ರೀನಿವಾಸ್,ಮುಜಾಯಿದ್ ಖಾನ್, ನಾಗೇಶ್, ಅತಿಕ್ ಅಹಮದ್, ರೂಪ, ವೇದಾಂಬ, ಭಾಗ್ಯಮ್ಮ, ಸಾಕಮ್ಮ, ಸುಮಾ, ಚಂದ್ರಕಲಾ,ಹಿರಿಯ ಮುಖಂಡರಾದ ಚನ್ನಪ್ಪ, ಮೋಹನ್, ಬಸವರಾಜು, ಬೋರೇಗೌಡ, ಸ್ವಾಮಿಗೌಡ, ಶಿವೇಗೌಡ, ಮಾದೇವ, ಚಂದ್ರು ಸೇರಿದಂತೆ ಉಪಸ್ಥಿತರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ ಆರ್ ಪೇಟೆ ವರದಿ