ನಗರಸಭೆಯಲ್ಲಿ ಪ್ರತಿಧ್ವನಿಸಿದ ಗುಂಡಿ ಗೊಟಾರಗಳ ಸದ್ದು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎಲ್ಲೆಡೆ ಅಂಗಡಿ ಮುಂಗಟ್ಟು ದೇವಾಲಯ, ಆಸ್ಪತ್ರೆ, ಮನೆಗಳು ಮತ್ತಿತರ ವ್ಯಾಪಾರಿ ವಹಿವಾಟುಗಳಿಗೆ ಮಳೆ ನೀರು ತುಂಬಿ ಆದ ಅನಾಹುತಕ್ಕೆ ಕಾರಣ ಕೇಳಿ ಪರಿಹಾರ ಕಂಡುಕೊಳ್ಳಲು ನಗರಸಭೆ ಪ್ರಭಾರ ಅಧ್ಯಕ್ಷ ಮಣೆ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಗುಂಡಿಗಳಿಂದ ಆಗುತ್ತಿರುವ ಅನಾಹುತ, ನೀರು ಹರಿಯದಂತೆ ಮಾಡಿ ರಾವ ಕಳಪೆ ರಾಜ ಕಾಲುವೆ, ಸತ್ತು ಹೋಗಿ ರುವ ಒಳ ಚರಂಡಿ ಯೋಜನೆ ಪ್ರತಿಧ್ವನಿಸಿತು.

ಪ್ರಭಾರ ಅಧ್ಯಕ್ಷ ಮಣಿ ಪಿ ಡಬ್ಲ್ಯೂ ಡಿ ಎಇಇ ಬಸವರಾಜ್, ನಗರಸಭೆ ಎಇಇ ಶಿವಪ್ರಸಾದ್‌ ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡರು.

ಎಲ್ಲೆಡೆ ರಸ್ತೆ ಮಾಡುವಾಗ ಮಳೆ ನೀರು ಹೊಗದಂತೆ ಕಾಮಗಾರಿ ಮಾಡಿದ್ದೀರಿ, ಒಂದು ಲಕ್ಷ ರೂ ಗಳಿಂದ ಊರಿನ ಎಲ್ಲಾ ಗುಂಡಿ ಗಳನ್ನು ಮುಚ್ಚಬಹುದು. 

ನೀರು ಹೊಳೆಗೆ ಹೋಗುವಂತೆ ಮಾಡಲು ವೈಜ್ಞಾನಿಕವಾಗಿ ತರೀಕೆರೆ ರಸ್ತೆ ಕಟ್ಟಿಂಗ್ ಮಾಡಬೇಕು. ರೋಡ್ ಕಟ್ಟಿಂಗ್ ಮಾಡಲು ಮೇಲಾಧಿಕಾರಿಗಳ ಅನುಮತಿ ಬೇಕು. ನಮ್ಮಲ್ಲಿ ಯಾವುದೇ ಹಣವಿಲ್ಲ. ಮಳೆಯಿಂದಾಗಿ ಟಾರ್ ಹಾಕಲಾಗಲ್ಲ. ಮಳೆ ನಿಂತ ಮೇಲೆ ಮಾಡುತ್ತೇವೆಂದರು. 

ಈ ಮಾತಿಗೆ ಸಿಡಿದೆದ್ದ ಪ್ರಭಾರ ಅಧ್ಯಕ್ಷ ಮಣಿ ಹಾಗೂ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾಧ್ಯಮಗಳು ನಮಗೆ ಭೀಮಾರಿ ಹಾಕಿದೆ. ನಿಮ್ಮಿಂದಾಗಿ ಜನರು ತತ್ತರಿಸಿದ್ದಾರೆ. ಅನುಮತಿ ಕಾಯಿದೆ ಕೆಲಸ ಮಾಡಿ ಎಂದರೆ ಅನುಮತಿ ಇಲ್ಲದೆ ಮಾಡಲಾಗಲ್ಲವೆಂದರು, ಬಿ.ಕೆ.ಮೋಹನ್ ನೀವು ಮಾಡಿದ ತಪ್ಪಿಗೆ
ನಾವು ಉಗಿಸಿಕೊಳ್ಳುತ್ತಿದ್ದೇವೆ.

ಭೂತನಗುಡಿ, ಡಾ. ರಾಜಕುಮಾರ್ ರಸ್ತೆ, ತರೀಕೆರೆ ರಸ್ತೆ ಮುಂತಾದ ಬಡಾವಣೆಗಳ 
ಸಂತ್ರಸ್ಥರು ಭಾಗವಹಿಸಿದ್ದರು. ಮಳೆ ನೀರನ್ನು ಹೊರ ಹಾಕಿದ ಪರಿಯನ್ನು ಸಭೆಯಲ್ಲಿ ನೋವನ್ನು ತೋಡಿಕೊಂಡರು. ಇದಕ್ಕೆಲ್ಲಾ ಇಂಜಿನಿಯರ್‌ಗಳು ಮಾಡಿರುವ ಬೇಕಾಬಿಟ್ಟಿ ರಾಜಕಾಲುವೆಗಳು ಒಳಚರಂಡಿ ಸ್ವಚತೆ ನೀರು ಸರಾಗವಾಗಿ ಹರಿಯದೆ ನಮಗೆಲ್ಲಾ ತೊಂದರೆಯಾಗಿದೆ ಎಂದು ದೂರಿದರು. 

ಸಭೆಯಲ್ಲಿ ಪೌರಾಯುಕ್ತ ಎಂ.ಚಿನ್ನಪ್ಪನವ‌ರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಸೇರಿದಂತೆ ಅನೇಕ ಸದಸ್ಯರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು