ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಖಾನೆ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾ ಪ್ರಬಂಧಕ (ವರ್ಕ್ಸ್) ಕೆ.ಎಸ್. ಸುರೇಶ್, ಮಹಾಪ್ರಬಂಧ ಕರು (ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಮತ್ತಿತರರು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರೇಮಭಾಯಿ.ಹೆಚ್, ಗಿರಿಜ.ಎನ್ ಮತ್ತು ರಮ್ಯ.ಯು, ಕುಸುಮ, ಮಂಜುನಾಥ್
ಗಿರಿಜ.ಎನ್, ರಮ್ಯ.ಯು,ಆಶಾ.ಎನ್
ಕೆ. ಲಕ್ಷ್ಮಣ, ರವಿಕುಮಾರ್.ಜಿ,ರಕ್ಷಿತ.ಕೆ.ಡಿ ಮಂಜುಶ್ರೀ.ಎಸ್.ಎನ್.ಉನ್ನೀಕೃಷ್ಣನ್
ಕರುನಾಡ ತಾಯಿ ಸದಾಚಿನ್ಮಯಿ ಫ್ರಾನ್ಸಿಸ್. ಎ.ಜೆ, ತ್ರಿವೇಣಿ, ರಕ್ಷಿತ.ಕೆ.ಡಿ ಮತ್ತು ಮಂಜುಶ್ರೀ.ಎಸ್.ಎನ್, ನಾಗೇಂದ್ರಪ್ಪ. ಎಮ್.ಪಿ,ಯೋಗೇಶ್ವರಿ. ಡಿ.ಕೆ. ಲಕ್ಷ್ಮಣ,ಜಗದೀಶ್
ಬಿ.ಎಲ್. ಚಂದ್ವಾನಿ, ಎಲ್. ಪ್ರವೀಣ್ ಕುಮಾರ್ ಮತ್ತಿತರರು ಕನ್ನಡದ ಗೀತೆಗಳನ್ನು ಹಾಡಿ ಮನರಂಜಿಸಿದರು.
ಅಧಿಕಾರಿಗಳಾದ ಶೋಭ ಶಿವಶಂಕರನ್, ಹರಿಕೃಷ್ಣ ಗುಡೆ,ವಿಐಎಸ್‌ಎಲ್ ಕಾರ್ಮಿಕ ಸಂಘದ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-------------- ----
ಪೊಲೀಸ್ ಠಾಣೆಯಲ್ಲಿ ರಾಜ್ಯೋತ್ಸವ
ಭದ್ರಾವತಿ: ಕನ್ನಡ ನಾಡಿನ ಸೇವೆ ಮಾಡಲು ನಾವೆಲ್ಲಾ ಸನ್ನದ್ಧರಾಗಿರೋಣ ಎಂದು ಪಿಎಸ್ಐ ಶಾಂತಲಾ ಕರೆ ಕೊಟ್ಟರು.
ಶುಕ್ರವಾರ ನಗರದ ನ್ಯೂಟೌನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಪ್ರೇಮಿ ಹೆಡ್ ಕಾನ್ಸ್ ಟೇಬಲ್ ಹಾಲೇಶಪ್ಪ ಮಾತನಾಡಿ ಹೇರಿಕೆ ಹಾಗೂ ತೂರಿಕೆ ಇಲ್ಲದೆ ಕನ್ನಡ ಭಾಷೆ ಮಾತನಾಡೋಣ,ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳೋಣ ಆಗ ಕನ್ನಡ ಉಳಿಸಿ ಎಂದು ಹೋರಾಡುವ ಅಗತ್ಯ ವಿರುವಿದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಎಸ್ಐ ಜಯಲಕ್ಷ್ಮಿ, ಹೆಚ್.ಸಿಗಳಾದ ರವಿ, ಬಸವರಾಜ್, ಶೀಲ, ಪ್ರತಿಮಾ, ಮಹೇಂದ್ರ, ರವಿಕುಮಾರ್ ಹಾಲೇಶಪ್ಪ, ಪಿಸಿಗಳಾದ ಅಶ್ವತ್ಥ್ ನಾರಾಯಣ, ದೇವರಾಜ್, ಸ್ವಾಮಿ, ಶ್ರೀನಿವಾಸ್, ಬಾಬುಪ್ರಸಾದ್, ಮಧುಕುಮಾರ್ ಹಾಜರಿದ್ದರು.
------====-----
ತಾಲೂಕು ಆಡಳಿತ ವತಿಯಿಂದ ಅದ್ದೂರಿ ರಾಜ್ಯೋತ್ಸವ
ಭದ್ರಾವತಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಇಂದು ಹಳೆನಗರದ ಕನಕ ಮಂಟಪ ಮೈದಾನ ಏರ್ಪಡಿಸಲಾಗಿತ್ತು.
ತಾಲೂಕು ದಂಡಾಧಿಕಾರಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೆ ಆರ್ ಐ ಡಿ ಎಲ್ ಅಧ್ಯಕ್ಷರು ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ್,ನಗರಸಭಾ ಪ್ರಭಾರ ಅಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭಾ ಸದಸ್ಯರಾದ ರಿಯಾಜ್ ಅಹ್ಮದ್ , ಜಾರ್ಜ್ , ಚನ್ನಪ್ಪ , ಬಸವರಾಜ್, , ಬಿಇಒ ನಾಗೇಂದ್ರಪ್ಪ , ಪೌರಾಯುಕ್ತರು ಚನ್ನಪ್ಪ ನವರ್, ಸಿಡಿಪಿಓ ಈರಪ್ಪ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗಗಳು ನಾಗರಿಕರು ಉಪಸ್ಥಿತರಿದ್ದರು.