ವಿಜಯ ಸಂಘರ್ಷ ನ್ಯೂಸ್
ಸಾಗರ: ಶರಾವತಿ ಕಳಸವಳ್ಳಿ ಬಳಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರು ಯುವಕರ ಮೃತದೇಹ ಗುರುವಾರ ಪತ್ತೆಯಾಗಿದೆ. ಶರಾವತಿ ಹಿನ್ನೀರಿನಲ್ಲಿ ಬುಧವಾರ ಸಂಜೆ ಘಟನೆ ನಡೆದಿತ್ತು. ಹಿನ್ನೀರಿನ ನಡುಗಡ್ಡೆಯಲ್ಲಿ ಊಟಕ್ಕೆ ತೆರಳಿದ್ದ ಐವರು ಯುವಕರ ಪೈಕಿ, ತೆಪ್ಪ ಮಗುಚಿದ್ದ ವೇಳೆ ಮೂವರು ಕಣ್ಮರೆಯಾಗಿದ್ದರು.ಚೇತನ್ ಜೈನ್ ಸಿಗಂದೂರು(28), ಸಂದೀಪ್ ಹುಲಿದೇವರಬನ(30) ಹಾಗೂ ರಾಜೀವ್ ಗಿಣಿವಾರ(34) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಹಾಗೂ ಆಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು.
ಗುರುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಯುವಕರ ಮೃತದೇಹ ವನ್ನ ಮೇಲಕ್ಕೆತ್ತಿದ್ದಾರೆ. ನೀರಿನಾಳದಲ್ಲಿ ಇದ್ದ ಮೂವರು ಯುವಕರ ಶವವನ್ನ ಪತ್ತೆ ಮಾಡಲಾಗಿದೆ.
ಸ್ಥಳೀಯರ ಮನವಿ ಹಿನ್ನೆಲೆ ಸಾಗರ ತಾಲೂಕು ಆಸ್ಪತ್ರೆ ಬದಲಾಗಿ, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನoತರ ಮೃತದೇಹ ಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ತಾಲೂಕು ಆಡಳಿತ ವ್ಯವಸ್ಥೆ ಮಾಡಿಕೊಂಡಿದೆ.
Tags:
ಸಾಗರ ದುರಂತ ಸುದ್ದಿ