ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು ಅವು ಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿ ಹೊರಬೇಕು ಎಂದು ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್ ಹೇಳಿದರು.
ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿ ಜೈನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಸರ್ಕಾರಕ್ಕೆ ಸರಿಸಮನಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್,ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘಗಳು ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿವೆ. ಇಂತಹ ಸಹಕಾರ ಸಂಘಗಳ ಉಳಿವಿಗಾಗಿ ನಾವೆಲ್ಲರೂ ಪ್ರಾಮಾಣಿಕ ವಾಗಿ ಶ್ರಮ ವಹಿಸಬೇಕು. ಆರಂಭ ದಲ್ಲಿ ತೀವ್ರ ನಷ್ಟದಲ್ಲಿದ್ದ ಸಂಘ ಆಡಳಿತ ಮಂಡಳಿಯ ಸದಸ್ಯರ ಇಚ್ಛಾಶಕ್ತಿಯಿಂದ ಇಂದು ನೂತನ ಕಟ್ಟಡ ನಿರ್ಮಾಣವಾಗಿದೆ.ಸಹಕಾರ ಸಂಘಗಳಲ್ಲಿ ಸಾಲ ಪಡೆದ ಜನರು ನಿಗದಿತ ಅವಧಿಯಲ್ಲಿ ಮರು ಪಾವತಿ ಸಬೇಕು ಇದರಿಂದ ಬೇರೆಯವರಿಗೆ ಹಣಕಾಸಿನ ನೆರವು ದೊರೆತು ಸಹಕಾರ ತತ್ವ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಶೋಕ್ ನಮ್ಮ ಸಂಘ ಐದು ವರ್ಷಗಳ ಹಿಂದೆ ತೀವ್ರ ನಷ್ಟಕ್ಕೆ ಸಿಲುಕಿ ಮುಚ್ಚುವ ಪರಿಸ್ಥಿತಿಯಲ್ಲಿತ್ತು ಆದರೆ ಗ್ರಾಮದ ಹಿರಿಯರ ಮಾರ್ಗದರ್ಶನ ಸಂಘದ ಸರ್ವ ಸದಸ್ಯರ ಸಹಕಾರ ದೊಂದಿಗೆ ಕಳೆದ ವರ್ಷದ 10 ಲಕ್ಷ ರೂ ಗಳ ಲಾಭಾಂಶದ ಹಣದಲ್ಲಿ ಸುಸರ್ಜಿತ ವಾಗಿ ಕಟ್ಟಡ ನಿರ್ಮಾಣಕ್ಕೆ ಕಾಯ ವಾಚ ಮನಸ್ಸಿನಿಂದ ಶ್ರಮದ ಫಲವಾಗಿ ಇಂದು ಕಟ್ಟಡ ಉದ್ಘಾಟನೆಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಈಶ್ವರಚಾರಿ, ಸಂಘದ ನಿರ್ದೇಶಕರಾದ ರಾಮ ಕೃಷ್ಣೇಗೌಡ,ಜಯಮ್ಮ, ಸಿದ್ದೇಗೌಡ, ಸರಸ್ವತಮ್ಮ,ರಾಜೇಗೌಡ,ಅಣ್ಣಯ್ಯ,ವೆಂಕಟೇಶ್, ಕುಮಾರ್, ಅಶೋಕ್, ಅರುಣಕುಮಾರ್,ಎಂಡಿಸಿಸಿ ಮೇಲ್ವಿಚಾರಕ ಜಲೇಂದ್ರ,ಸಂಘದ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಭಾನುಮತಿ,ರಾಘವೇಂದ್ರ, ರಘು, ಚೇತನ್,ಸತೀಶ್, ದರ್ಮ,ಮುಖಂಡ ರಾದ ಭಾಸ್ಕರ್, ಹೊನ್ನೇಗೌಡ,ದೇವ ರಾಜೇಗೌಡ, ಶಿಕ್ಷಕ ಚಂದ್ರು, ಬೋಜೆೇಗೌಡ ಸತೀಶ್, ಶ್ರೀನಿವಾಸ್, ಜಲೇಂದ್ರ ಜಯ ರಾಮೇಗೌಡ ಮಹದೇವ್, ಯುವ ಮುಖಂಡ ಚೇತನ್ ಸೇರಿದಂತೆ ಸಂಘದ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.
*✍️ಸುದ್ಧಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags:
ಕೆ ಆರ್ ಪೇಟೆ ವರದಿ