ಕನಕದಾಸರ ವ್ಯಕ್ತಿತ್ವವೇ ಒಂದು ವಿಶ್ವವಿದ್ಯಾಲಯ: ಅನುರೂಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕನಕದಾಸರ ವ್ಯಕ್ತಿತ್ವವೇ ಒಂದು ವಿಶ್ವವಿದ್ಯಾಲಯ ವಿದ್ದಂತೆ. ತಮ್ಮ ಕೀರ್ತನೆ ಗಳ ಮೂಲಕ ಸಾಮಾಜಿಕ ಅನಿಷ್ಟವನ್ನು ತೊಲಗಿ ಸಲು ಪ್ರಯತ್ನಿಸಿದ ಮಹಾನ್ ದಾಸ ಶ್ರೇಷ್ಠ ಮತ್ತು ತತ್ವಜ್ಞಾನಿ ಎಂದು ದಾಸ ಸಾಹಿತ್ಯದಲ್ಲಿ ಸಂಶೋಧನೆ ಮಾಡುತ್ತಿರುವ ವೀಣಾ ವಾದಕಿ ನುಡಿದರು. 

ತಾಲ್ಲೂಕಿನ ಸರ್ಕಾರಿ ಅರಳಿಹಳ್ಳಿ ಪ್ರೌಢ ಶಾಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪ್ರೌಢ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಎಂ. ದಿವಾಕರ್ ಮಾತನಾಡಿ, ಕನಕ ದಾಸರನ್ನು ಕೇವಲ ಜಯಂತಿಗೆ ಮಾತ್ರ ಸೀಮಿತಗೊಳಿ ಸದೇ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು, ಭಕ್ತಿ, ನಿಷ್ಠೆಯನ್ನು ನಾವೆಲ್ಲರೂ ನಮ್ಮ ಬದುಕಿಗೆ ದಕ್ಕಿಸಿಕೊಳ್ಳಬೇಕಿದೆ. ಕನಕದಾಸರ ಒಂದೊಂದು ಮುಂಡಿಗೆ, ಸೂಳಾದಿ, ಕೀರ್ತನೆಯೂ ಕೂಡಾ ಪ್ರೇರಣಾ ದಾಯಕ ಹಾಗೂ ಅನನ್ಯ ವಾದುದು ಎಂದರು 

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಮಣಿ ಶೇಖರ್,ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ  ಸುರೇಶ್ ಉಪಸ್ಥಿತರಿದ್ದು ಮಾತನಾಡಿದರು. 

ಮೋನಿಕಾ ಕೀರ್ತನೆಯ ಮೂಲಕ ಪ್ರಾರ್ಥಿಸಿ, ಮಮತಾ ಸ್ವಾಗತಿಸಿದರೆ, ಮಂಜುಳಾ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕಿ ಕನಕ ದಾಸರ ಮುಂಡಿಗೆ ಹಾಡಿದರು. 

ಈ ಸಂದರ್ಭದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಎಲ್ಲಾ ಶಿಕ್ಷಕರಿಂದ ನಮನ ಸಲ್ಲಿಸಲಾಯಿತು. ರಾಜ್ಯ ಮಟ್ಟದ ರೂರಲ್ ಕ್ವಿಜ್ ನಲ್ಲಿ ಭಾಗವಹಿಸಿದ ಚಿಂತನ್ ಮತ್ತು ಇವರನ್ನು ತರಬೇತು ಗೊಳಿಸಿದ ಶಿಕ್ಷಕ ಇಮ್ರಾನ್ ಖಾನ್ ಇವರಿಗೆ ಅಭಿನಂದಿಸಲಾಯಿತು. 

ಭದ್ರಾವತಿ-ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕನಕದಾಸರ ಜಯಂತೋತ್ಸವ

ಭದ್ರಾವತಿ: ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕನಕದಾಸರ ಜಯಂತೋತ್ಸವ ನಡೆಯಿತು.ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯ ಬಿ.ಕೆ. ಮೋಹನ್, ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್, ಕುರುಬ ಸಮಾಜದ ಅಧ್ಯಕ್ಷ ಸಂತೋಷ್, ತಹಸೀಲ್ದಾರ್ ಕೆ. ಆರ್.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಭೆಗೂ ಮುನ್ನ ನಗರದ ಹುತ್ತಾ ಕಾಲೋನಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು