ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ ಗಳನ್ನೊಳಗೊಂಡು ಗ್ರೇಡ್ -1 ನಗರಸಭೆಯಾಗಿದ್ದು, ನಗರದ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಾದಚಾರಿ ಮಾರ್ಗಗಳನ್ನು ಹಾಗೂ ಮುಖ್ಯ ವೃತ್ತಗಳನ್ನು ಅಭಿವೃದ್ಧಿ ಪಡಿಸಿಲು ಅನುದಾನದ ಕೊರತೆ ಇದ್ದು, ಬಿಡುಗಡೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯರವರಿಗೆ ಮಂಜೂರು ಮಾಡಲು ತಮ್ಮ ಮುಖಾಂತರ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಮನವಿ ಸಲ್ಲಿಸಿದರು.
ನಗರದ ತರೀಕೆರೆ ರಸ್ತೆ ಗಾಂಧಿ ವೃತ್ತ ದಿಂದ ಮೊಸರಹಳ್ಳಿ ವರೆಗೆ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸುವುದು, ಸಿ ಎನ್ ರಸ್ತೆಯ ರಂಗಪ್ಪ ಸರ್ಕಲ್ ನಿಂದ ಎ ಪಿ ಎಂ ಸಿ ಮಾರ್ಕೆಟ್ ವರೆಗೆ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸುವುದು.
OSM ರಸ್ತೆಯಿಂದ ಗಾಂಧಿ ಸರ್ಕಲ್ ವರೆಗೆ ರಸ್ತೆಯ ಎರಡು ಬದಿ ಪಾದ ಚಾರಿ ಮಾರ್ಗ ಅಭಿವೃದ್ಧಿ ಪಡಿಸು ವುದು.ಹೊಳೆಹೊನ್ನೂರು ಸರ್ಕಲ್ ನಿಂದ ಅಮೀರ್ ಜಾನ್ ಕಾಲೋನಿ ವರೆಗೂ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸುವುದು.
ಹುತ್ತಾ ಸರ್ಕಲ್ ನಿಂದ ಕಡದಕಟ್ಟೆ ವರೆಗೆ ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಕಾಮಗಾರಿಗಳ ಅಭಿವೃದ್ಧಿ ಹಾಗೂ ಪಾದಚಾರಿ ಮಾರ್ಗ ಮತ್ತು ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರೂ 20 ಕೋಟಿ ಗಳ ಅನುದಾನದ ಅವಶ್ಯಕತೆ ಇದ್ದು, ನಗರ ಭೂ ಸಾರಿಗೆ ನಿರ್ದೇಶನಾಲಯ ರವರಿಗೆ ಅನುದಾನ ವನ್ನು ಮಂಜೂರಾತಿಗಾಗಿ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಿದರು.