ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಾಡು ಏಕೀಕರಣ ಗೊಳಿಸಿದ ಕನ್ನಡ ಭಾಷೆ ತರ್ಕಬದ್ದ ಮತ್ತು ವೈಜ್ಞಾನಿಕ. ನಾಡಿಗೆ ಐಕ್ಯತೆಯ ಮಂತ್ರ ತಿಳಿಸಿದೆ ಎಂದು ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಾಲಾಭಿ ವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ನುಡಿದರು.
ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಭಾರಿ ಮುಖ್ಯ ಶಿಕ್ಷಕ ಎಂ.ದಿವಾಕರ್ ಮಾತನಾಡಿ, ಕನ್ನಡ ಕೇವಲ ಭಾಷೆ ಯಲ್ಲ ಅದು ಸಂಸ್ಕೃತಿಯ, ಜೀವನ ವಿಧಾನದ ಪ್ರತೀಕ, ಆದ್ದರಿಂದ ಇತರೇ ಭಾಷೆಗಳಿಗಿಂತ ಹೆಚ್ಚಾಗಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವುದರ ಮೂಲಕ ಬೆಳೆಸಬೇಕೆಂದರು.
ಎಲ್ಲಾ ಶಿಕ್ಷಕರು ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪೋಲ್ ವಾಲ್ಟ್ ಕ್ರೀಡಾ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕಿ ಜ್ಯೋತಿ ಇವರನ್ನು ಅಭಿನಂದಿಸ ಲಾಯಿತು.
ಕನ್ನಡ ಶಿಕ್ಷಕಿ ಶೋಭಾ ಉಪನ್ಯಾಸ ನೀಡಿದರು.
ಜಾನಕಿ ಕಾರ್ಯಕ್ರಮ ನಿರೂಪಿಸಿ, ರುದ್ರೇಶ್ ಕನ್ನಡ ಗೀತೆಯ ಮೂಲಕ ಪ್ರಾರ್ಥನೆ ನಡೆಸಿಕೊಟ್ಟರು. ರಂಗರಾಜ್ ಸ್ವಾಗತಿಸಿದರು.
ಶಾಲೆಯ ಎಸ್ ಡಿಎಂಸಿ ಉಪಾಧ್ಯಕ್ಷ ಸುರೇಶ್, ಹರಿಬಾಬು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಹಬೀಬ್ , ಅನಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.