ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಗ್ರಾಮೀಣ ಭಾಗದಲ್ಲಿ ವಾಲಿಬಾಲ್ ಕ್ರೀಡೆ ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸಲು ಯುವ ಸಮುದಾಯ ಶ್ರಮಿಸಬೇಕಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಮಾತನಾಡಿ ದರು.ಇತ್ತೀಚಿನ ಬಹುತೇಕ ಯುವ ಜನತೆ ಟಿ.ವಿ, ಮೊಬೈಲ್, ವಾಟ್ಸ್‌ಆ್ಯಪ್ ನಿಂದಾಗಿ ಯುವಕರು ಸೋಮಾರಿತನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ವಾಲಿಬಾಲ್ ಕ್ರೀಡೆಯು ದೈಹಿಕ, ಮಾನಸಿಕವಾಗಿ ಕ್ರೀಡಾಪಟುಗಳನ್ನು ಸದೃಢರನ್ನಾಗಿ ಮಾಡುತ್ತದೆ.ಅಲ್ಲದೆ ಕ್ರೀಡಾಪಟುಗಳು ಸೂಕ್ಷ್ಮ ಚಿಂತಕರಾಗಿ ಹೊರಹೊಮ್ಮು ತ್ತಾರೆ ಹಾಗಾಗಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲುವುದು ಗೆಲ್ಲುವುದು ಮುಖ್ಯವಲ್ಲ, ನಿರ್ಣಾಯಕರು ಕೊಟ್ಟ ನಿರ್ಣಯದಂತೆ ನಡೆಯುವುದು ಮುಖ್ಯ ಎಂದರು ಜತೆಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಬಳಿಕ ಮಾತನಾಡಿದ ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್ ಗ್ರಾಮೀಣ ಭಾಗದ ಯುವಕಲ್ಲಿ ಅತ್ಯುತ್ತಮ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಟಗಾರರಿದ್ದಾರೆ.ಆದರೆ ಸೂಕ್ತ ವೇದಿಕೆ ಇಲ್ಲದೆ ಅವಕಾಶ ವಂಚಿತರಾಗಿ ಬೆಳಕಿಗೆ ಬರುತ್ತಿಲ್ಲ. ಕ್ರೀಡಾಸಕ್ತರಿಂದ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಸಂಘಟಿಸುವುದರಿಂದ ನೈಪುಣ್ಯತೆ ಉಳ್ಳ ಆಟಗಾರರು ಬೆಳಕಿಗೆ ಬರಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಜಾಣೆಗೌಡ, ಸಮಾಜ ಸೇವಕ ಮೊಟ್ಟೆ ಮಂಜು,ಕಾಯಿ ಸುರೇಶ್, ಲಕ್ಷ್ಮಿಪುರ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತೋಳಸಿ ರಮೇಶ್,ಕಿಕ್ಕೇರಿ ಧರ್ಮ,ಕಾಂಗ್ರೆಸ್ ಯುವ ಮುಖಂಡ ಉಜೈಫ್,ವಕೀಲ ಚಂದ್ರು, ಯುವ ಮುಖಂಡರಾದ ಮಂಜು,ಅನಿಲ್, ಸುನಿಲ್,ವಿವಿಧ ಜಿಲ್ಲೆ ಕ್ರೀಡಾಪಟುಗಳು ಭಾಗವಹಿಸಿದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags:
ಕೆ ಆರ್ ಪೇಟೆ ವರದಿ