ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಸೆನ್ ಪೊಲೀಸರು ಬಂಧಿಸಿ, 4 ಕೆ.ಜೆ 461 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ನ.4 ರ ಸಂಜೆ ನಗರದ ಬಿಳಕಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ, 2 ಜನರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಕಾರಿಯಪ್ಪ ಎ.ಜಿ, ಮಾರ್ಗದರ್ಶನದಲ್ಲಿ ಸೆನ್ ಪೊಲೀಸ್ ಠಾಣೆಯ ಕೃಷ್ಣಮೂರ್ತಿ ಕೆ ಮೇಲ್ವಿಚಾರಣೆ ಯಲ್ಲಿ ಮಂಜುನಾಥ ಪಿಐ ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡ ದಾಳಿ ನಡೆಸಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತ ರಾದ 1) ಮೊಹಮ್ಮದ್ ಅಕ್ರಂ, 26 ವರ್ಷ, ಬೊಮ್ಮನ ಕಟ್ಟೆ ಭದ್ರಾವತಿ ಮತ್ತು 2) ಅಬ್ದುಲ್ ರಜಾಕ್, 35 ವರ್ಷ, ಸತ್ಯಸಾಯಿ ನಗರ ಭದ್ರಾವತಿ, ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ ಅಂದಾಜು ಮೌಲ್ಯ 1,40,000/- ರೂಗಳ 4 ಕೆಜಿ 461 ಗ್ರಾಂ ತೂಕದ ಒಣ ಗಾಂಜಾ ಮತ್ತು ಅಂದಾಜು ಮೌಲ್ಯ 3,000/- ರೂ ಗಳ ಮೊಬೈಲ್ ಫೋನ್ ಹಾಗೂ ಅಂದಾಜು ಮೌಲ್ಯ 70,000/- ರೂ ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು 2,13,000/- ರೂಗಳ ಮಾಲನ್ನುನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0123/2024 ಕಲಂ 20(b)(ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Tags:
ಭದ್ರಾವತಿ ಗಾಂಜಾ ರೇಡ್