ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾಪೋರೇಟ್ ವಿಜಿಲೆನ್ಸ್‌ನ ನಿರ್ದೇಶನದ ಮೇರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ- 2024ನ್ನು" ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಎಂಬ ಧೈಯವಾಕ್ಯದೊಂದಿಗೆ ಅ: 28 ರಿಂದ ನ: 3 2024 ರವರಿಗೂ ಆಚರಿಸಲಾಯಿತು.
ಸಪ್ತಾಹದ ಸಮಾರೋಪ ಸಮಾರಂಭ ವನ್ನು ಬುಧವಾರ ನ್ಯೂಟೌನ್ ಶಾರದಾ ಮಂದಿರ ದಲ್ಲಿ ಆಯೋಜಿಸಲಾಗಿತ್ತು. ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ,ಮುಖ್ಯ ಮಹಾಪ್ರಬಂಧಕ (ಸ್ಥಾವರ),ಕೆ.ಎಸ್. ಸುರೇಶ್, ಮಹಾ ಪ್ರಬಂಧಕ (ವಿಜಿಲೆನ್ಸ್ ಮತ್ತು ಎ.ಸಿ.ವಿ.ಓ) ರಘುನಾಥ ಬಿ. ಅಷ್ಟಪುತ್ರ, ಕಾರ್ಮಿಕರ ಸಂಘದ ಉಪಾಧ್ಯಕ್ಷ ಕೆ.ಬಿ.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ, ಅಧಿಕಾರಿಗಳ ಸಂಘದ ವಿಕಾಸ್ ಬಸೇರ್, ಇವರು ಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೈಂಟ್ ಜಾರ್ಲ್ಸ್ ಶಾಲೆಯ 3ನೇ ತರಗತಿ ವಿಧ್ಯಾರ್ಥಿನಿ ಪಾವನಿ ಎಮ್. ನಾಯಕ್ ಭರತನಾಟ್ಯದಿಂದ ಪ್ರೇಕ್ಷಕರನ್ನ ಬೆರಗು ಗೊಳಿಸಿದಳು. ಅನನ್ಯ ಶಾಲೆಯ ಮಕ್ಕಳು ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕಿನಲ್ಲಿ ಪ್ರಾಮಾಣಿಕತೆ, ನೀತಿ ಮತ್ತು ಮೌಲ್ಯ ಗಳ ಮಹತ್ವ ಸಾರುವ "ಸತ್ಯ-ನಿಷ್ಠ" ಎಂಬ ನಾಟಕ ಪ್ರದರ್ಶಿಸಿದರು.
ಮಹಾಪ್ರಬಂಧಕ ರಘುನಾಥ ಬಿ. ಅಷ್ಟಪುತ್ತೆ ಜಾಗೃತಾ ತಿಳುವಳಿಕೆ ಸಪ್ತಾಹ-2024 ರ ಅಂಗವಾಗಿ ಹಮ್ಮಿಕೊಂಡಿದ್ದ ಉದ್ಯೋಗಿ ಗಳಿಗೆ, ಆಯೋಜಿಸಿದ್ದ ತರಬೇತಿ, ಗ್ರಾಹಕರ ಸಭೆ, ನೈತಿಕ ಉಧ್ಯಾನವನ ಸ್ವಚ್ಛತೆ ಚಟುವಟಿಕೆಗಳ ವರದಿ ಮಂಡಿಸಿದರು.
ಕೆ.ಎಸ್. ಸುರೇಶ್ ಪ್ರಾಮಾಣಿಕತೆ, ನೀತಿ, ಪಾರದರ್ಶಕತೆ ಮತ್ತು ಮೌಲ್ಯಗಳ ಮಹತ್ವ ತಿಳಿಸಿದರು.
ವಿಐಎಸ್‌ಎಲ್‌ನ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಪೊಸ್ಟರ್ ಡಿಜೈನ್, ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ, ಮತ್ತು ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಎಥಿಕ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಅನನ್ಯ ಶಾಲೆಯ ಬಿ.ಎಸ್. ಅನಿಲ್ ಕುಮಾರ್, ವೇಣುಗೋಪಾಲ್, ಕಲ್ಲೇಶ್ ಕುಮಾರ್.ಕೆ. ಮುಖೋಪಾಧ್ಯಾರು ಸಿಬ್ಬಂದಿಗಳು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಿಐಎಸ್‌ಎಲ್‌ನ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಬರೆದ ಪೊಸ್ಟರ್ ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಕೇದಾರನಾಥ್ ಸ್ವಾಗತಿಸಿದರೆ, ಸಿ. ಲಕ್ಷ್ಮೀಕಾಂತ ಪ್ರಾರ್ಥಿಸಿ, ಚೇತನ್ ತಡ್ಕಲ್ ವಂದಿಸಿ, ಎಲ್. ಕುತಲನಾಥನ್ ಕಾರ್ಯಕ್ರಮ ನಿರೂಪಿಸಿದರು.
Tags:
ಭದ್ರಾವತಿ ವಿಐಎಸ್ ಎಲ್ ವರದಿ