ಚಿರತೆ ಉಗುರು-ಹಲ್ಲು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

ವಿಜಯ ಸಂಘರ್ಷ ನ್ಯೂಸ್ 
ಸಾಗರ: ತಾಲ್ಲೂಕಿನ ದಾಸಕೊಪ್ಪ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಅಕ್ರಮವಾಗಿ ಚಿರತೆ ಉಗುರು, ಹಲ್ಲನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರ ದಳದ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.
ಶಿಕಾರಿಪುರ ಸಮೀಪದ ಹಾರೊಗೊಪ್ಪ ಗ್ರಾಮದ ಲೋಕೇಶ್ ಬಂಧಿತ ಆರೋಪಿಯಾಗಿದ್ದಾನೆ.

ಬಂಧಿತರಿಂದ ಚಿರತೆಯ 16 ಉಗುರು, ಮೂರು ಹಲ್ಲುಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಲಾಗಿದೆ.
ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್ಪಿ ಎಸ್.ಎಸ್. ಕಾಶಿ ಅವರ ಮಾರ್ಗದರ್ಶನದಲ್ಲಿ ಸಾಗರಪೊಲೀಸ್ ಅರಣ್ಯ ಸಂಚಾರ ದಳದ ಸಿಬ್ಬಂದಿ ಗಣೇಶ್, ವಿಶ್ವನಾಥ, ಆಂಜನೇಯ, ದಿನೇಶ್, ಪ್ರಮೋದ ಕುಮಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು